fbpx
ಸಮಾಚಾರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲೂ ಪ್ರಚಾರ!

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರ ಓಲೈಕೆಗೆ ಹಾಲಿ ಅಧ್ಯಕ್ಷ ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌ ಎಂಬ ಘೋಷಣೆ ಮಾಡುತ್ತಿರುವ ಬೆನ್ನಲ್ಲೇ, ಅವರ ಪ್ರತಿಸ್ಪರ್ಧಿ ಡೆಮಾಕ್ರಟ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಕನ್ನಡ ಸೇರಿದಂತೆ ಭಾರತದ 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಅಮೆರಿಕದಲ್ಲೇ ಅತ್ಯಂತ ಪ್ರಭಾವೀ ಸಮುದಾಯವಾದ ಭಾರತೀಯ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್‌ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳ ಮೊರೆ ಹೋಗಿದ್ದಾರೆ. ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಪ್ರಚಾರ ಸರಕುಗಳನ್ನು ಬಳಸಲು ಬಿಡೆನ್‌ ತಂಡ ಆರಂಭಿಸಿದೆ.

ಜೋ ಬಿಡೆನ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಭಾರತೀಯ ಮತದಾರರನ್ನು ಸೆಳೆಯಲು ಪ್ರಭಾವಶಾಲಿ ಘೋಷಣೆ ಸಿದ್ದಪಡಿಸುತ್ತಿದ್ದಾರೆ. “ಅಮೆರಿಕಾ ನಾಯಕ್ ಕೈಸಾ ಹೋ, ಜೋ ಬಿಡೆನ್ ಜೈಸಾ ಹೋ” (ಅಮೆರಿಕಾದ ನಾಯಕ ಬಿಡೆನ್‌ನಂತೆ ಇರಬೇಕು) ಎಂದು ಹಿಂದಿ, ಕನ್ನಡ ಹಾಗೂ ತೆಲುಗು ಸೇರಿದಂತೆ ಹಲವೆ ಭಾರತೀಯ ಭಾಷೆಗಳಲ್ಲಿ ಘೋಷಣೆ ಪ್ರಕಟಿಸಲಿದ್ದಾರೆ.

ಕನ್ನಡ, ತೆಲುಗು, ಹಿಂದಿ, ಪಂಜಾಬಿ, ತಮಿಳು, ಬಂಗಾಳಿ, ಉರ್ದು, ಮಲಯಾಳಂ, ಒರಿಯಾ, ಮರಾಠಿ ಹಾಗೂ ನೇಪಾಳಿ ಸೇರಿದಂತೆ 14 ಭಾಷೆಗಳಲ್ಲಿ ಪ್ರಚಾರ ಅಭಿಯಾನ ನಡೆಸಲು ಜೋ ಬಿಡನ್ ಅವರ ಪ್ರಚಾರ ತಂಡದೊಂದಿಗೆ ಅಜಯ್ ಭಟೋರಿಯಾ ಪ್ರಯತ್ನ ನಡೆಸುತ್ತಿದ್ದಾರೆ.

ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಭಾರತೀಯ- ಅಮೆರಿಕನ್‌ ಸಮುದಾಯವನ್ನು ಸೆಳೆಯಲು ಡೆಮಾಕ್ರಾಟ್‌ ಅಧ್ಯಕ್ಷೀಯ ಆಕಾಂಕ್ಷಿ ಜೋ ಬಿಡೆನ್‌ ಮುಂದಾಗಿದ್ದು, ಕನ್ನಡ ಸಹಿತ 14 ಭಾಷೆಗಳಲ್ಲಿ ಪ್ರಚಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top