fbpx
ಸಮಾಚಾರ

ನರೇಂದ್ರ ಮೋದಿಗೆ ಸುಶಾಂತ್‌ ಸಹೋದರಿ ಬಹಿರಂಗ ಪತ್ರ! ತಮ್ಮನಿಗಾಗಿ ಪ್ರಧಾನಿ ಬಳಿ ಒಂದೇ ಒಂದು ಕೋರಿಕೆ

ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಸುಶಾಂತ್ ಆತ್ಮಹತ್ಯೆಯ ಬಗ್ಗೆ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಆತ್ಮಹತ್ಯೆಗೂ ಮುನ್ನ ಸುಶಾಂತ್ ಯಾರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ಯಾರ ಜೊತೆ ಚಾಟ್ ಮಾಡಿದ್ದರುಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುಶಾಂತ್ ಸೋಹದರಿ ಶ್ವೇತ ಸಿಂಗ್ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಪೆರೆದಿದ್ದಾರೆ.

 

 

ಬಹಿರಂಗವಾಗಿಯೇ ಪತ್ರ ಬರೆದಿರುವ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ‘ನಾನು ಸುಶಾಂತ್‌ ಸಹೋದರಿ. ಈ ಪ್ರಕರಣದ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಎಂದು ಬೇಡಿಕೊಳ್ಳುತ್ತೇನೆ. ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ’ ಎಂದು ಶ್ವೇತಾ ಹೇಳಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಪತ್ರವನ್ನು ಪೋಸ್ಟ್ ಮಾಡಿರುವ ಶ್ವೇತಾ ಸಿಂಗ್, ‘ಡಿಯರ್‌ ಸರ್‌… ನೀವು ಸತ್ಯದ ಪರವಾಗಿ ನಿಲ್ಲುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾವು ತುಂಬ ಸರಳ ಕುಟುಂಬದವರು. ನನ್ನ ತಮ್ಮ ಬಾಲಿವುಡ್‌ಗೆ ಬಂದಾಗ ಅವನಿಗೆ ಯಾವುದೇ ಗಾಡ್‌ಫಾದರ್‌ ಇರಲಿಲ್ಲ. ಈಗಲೂ ಇಲ್ಲ. ನೀವು ಕೂಡಲೇ ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂಬುದು ನನ್ನ ಮನವಿ. ಯಾವುದೇ ಸಾಕ್ಷಿ ನಾಶ ಆಗಲು ಅವಕಾಶ ಕೊಡಬೇಡಿ. ಸತ್ಯಕ್ಕೆ ಜಯವಾಗಲಿ’ ಎಂದು ಶ್ವೇತಾ ಪತ್ರ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top