fbpx
ಸಮಾಚಾರ

ಮತ್ತೆ ಮಾನವೀಯತೆ ಮೆರೆದ ಸೋನು ಸೂದ್: ಮಕ್ಕಳ ದತ್ತು ಪಡೆದ ‘ವಿಷ್ಣುವರ್ಧನ’ ನಟ

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದಾರೆ. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ ಸೋನು ಸೂದ್. ಈಗ ಹೆತ್ತವರ ಕಳೆದುಕೊಂಡು 3 ಮಕ್ಕಳ ದತ್ತು ಪಡೆದಿದ್ದಾರೆ.

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಆತ್ಮಕೂರ್ ಗ್ರಾಮದ ಮೂವರು ಮಕ್ಕಳು ಕೊರೋನಾತಂಕದ ನಡುವೆ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಈ ಅನಾಥರಿಗೆ ಹೇಗಾದರೂ ಸಹಾಯ ಮಾಡಿ ಎಂದು ಟ್ವಿಟರ್‌ ಮೂಲಕ ವ್ಯಕ್ತಿಯೊಬ್ಬರು ಆಗ್ರಹಿಸಿದ್ದರು. ಈ ವಿಚಾರವನ್ನು ಗಮನಿಸಿದ ಸೋನು ಸೂದ್ ಈ ಮಕ್ಕಳು ಇನ್ಮುಂದೆ ಅನಾಥರಲ್ಲ. ಇವರ ಜವಾಬ್ದಾರಿ ನನ್ನದು ಎಂದಿದ್ದಾರೆ. ಈ ಮೂಲಕ ತೆರೆ ಮೇಲಿನ ಖಳನಟ ಮತ್ತೆ ತಮ್ಮ ಹೃದಯ ಶ್ರೀಮಂತಿಕೆಯಿಂದ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಪತ್ರಕರ್ತ ರಾಜೇಶ್ ಕರಣಂ ಅವರು ಟ್ವಿಟ್ಟರಿನಲ್ಲಿ ಸೋನು ಸೂದ್ ಅವರಿಗೆ ಟ್ಯಾಗ್ ಮಾಡುವ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಪೋಷಕರಿಲ್ಲದ ಮಕ್ಕಳು ತಮ್ಮ ಮನೆಯ ಕೆಲಸಗಳನ್ನು ತಾನೇ ಮಾಡುತ್ತಿದ್ದರು. ಅಲ್ಲದೇ ಹಿರಿಯ ಸಹೋದರ ತನ್ನ ಇಬ್ಬರು ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

 

 

ಈ ವಿಡಿಯೋ ಶೇರ್ ಮಾಡಿ, “ಭುವನಗಿರಿ ಜಿಲ್ಲೆಯ ಯಾದಾದ್ರಿ ಗ್ರಾಮದ ಈ ಮೂವರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಈ ಮೂವರು ಮಕ್ಕಳು ನೋಡಿಕೊಳ್ಳಲು ಹಿರಿಯರು ಯಾರು ಇಲ್ಲ. ಆದ್ದರಿಂದ ಇವರು ಅನಾಥರಾಗಿದ್ದಾರೆ. ಹೀಗಾಗಿ ಇವರಿಗೆ ದಯವಿಟ್ಟು ಸಹಾಯ ಮಾಡಿ” ಎಂದು ಸೋನು ಸೂದ್ ಬಳಿ ಮನವಿ ಮಾಡಿಕೊಂಡಿದ್ದರು.

ಈ ವಿಡಿಯೋ ಶೇರ್​ ಮಾಡಿದ 15 ನಿಮಿಷಗಳಲ್ಲಿ ಸೋನು ಸೂದ್​ ಪ್ರತಿಕ್ರಿಯೆ ನೀಡಿ, ಅವರಿನ್ನು ಅನಾಥರಲ್ಲ, ಇನ್ಮುಂದೆ ಇವರ ಜವಾಬ್ದಾರಿ ನನ್ನದು ಎಂದಿದ್ದಾರೆ. ಸೋನು ಸೂದ್​​ರ ಸತತ ಸಹಾಯ ಮನೋಭಾವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top