fbpx
ಸಮಾಚಾರ

ಆತ್ಮಹತ್ಯೆಗೂ ಮುನ್ನ ಗೂಗಲ್‌ನಲ್ಲಿ ಈ 3 ವಿಚಾರ ಸರ್ಚ್ ಮಾಡಿದ್ದ ಸುಶಾಂತ್ : ಮುಂಬೈ ಪೊಲೀಸರು ಬಿಚ್ಚಿಟ್ಟ ಅಚ್ಚರಿಯ ವಿಚಾರ ಏನು ಗೊತ್ತಾ?

ಹಲವಾರು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು. ಅಲ್ಲದೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಸುಶಾಂತ್ ಸಿಂಗ್ ಆತ್ಮಹತ್ಯೆಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಕಳೆದ ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿ ಬಂದಿತ್ತು.

ಸುಶಾಂತ್ ಆತ್ಮಹತ್ಯೆಯ ಬಗ್ಗೆ ತನಿಖೆಯಾಗಬೇಕು ಅಂತ ಸುಶಾಂತ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದು ಆತ್ಮಹತ್ಯೆಗೂ ಮುನ್ನ ಸುಶಾಂತ್ ಯಾರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದರು. ಯಾರ ಜೊತೆ ಚಾಟ್ ಮಾಡಿದ್ದರುಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಪೊಲೀಸರು ಮತ್ತಷ್ಟು ಅಚ್ಚರಿಯ ವಿಚಾರ ಹೊರ ಹಾಕಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕಮೀಷನರ್ ಸಂಜಯ್ ಬಾರ್ವೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸುಶಾಂತ್ ಸಿಂಗ್ ಸಾಯುವ ಮೊದಲು ಗೂಗಲ್ ನಲ್ಲಿ ಕೆಲವು ಮಾಹಿತಿ ಸರ್ಚ್ (ಹುಡುಕು) ಮಾಡಿರುವ ವಿಷಯ ಬಹಿರಂಗಗೊಳಿಸಿದ್ದಾರೆ.

ಸುಶಾಂತ್ ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರಂತೆ. ಅಷ್ಟೇ ಅಲ್ಲ ಅವರ ಮಾಜಿ ಪಿಎ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಸುಶಾಂತ್ ಹೆಸರನ್ನು ತಳುಕು ಹಾಕಿದ ಸುದ್ದಿಗಳನ್ನು ಓದಿ ಸುಶಾಂತ್ ಬೇಸರಗೊಂಡಿದ್ದರಂತೆ.

ಇನ್ನು, ನೋವಿಲ್ಲದೆ ಸಾಯುವುದು ಹೇಗೆ ಎನ್ನುವ ಬಗ್ಗೆಯೂ ಸುಶಾಂತ್ ಹುಡುಕಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಆಗಲೇ ಅವರು ಸಾಯುವ ನಿರ್ಧಾರಕ್ಕೆ ಬಂದಿದ್ದರು. ಸ್ಕಿಜೋಫ್ರೇನಿಯಾ(ತೀವ್ರ ತರದ ಖಿನ್ನತೆ) ಹಾಗೂ ಬೈಪೊಲಾರ್ ಡಿಸಾರ್ಡರ್(ಮಾನಸಿಕ ಕಾಯಿಲೆ) ವಿಷಯದ ಕುರಿತು ಕೂಡ ಸುಶಾಂತ್ ಹುಡುಕಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top