fbpx
ಸಮಾಚಾರ

ಡಾರ್ಲಿಂಗ್‌ ಕೃಷ್ಣ ಜೊತೆ ನಟಿಸಲು ರಾಧಿಕಾ ಕುಮಾರಸ್ವಾಮಿ ‘ನೋ’ ಎಂದಿದ್ದಕ್ಕೆ ಇದೇ ಮುಖ್ಯ ಕಾರಣ: ಏನದು?

ಲವ್ ಮಾಕ್ಟೈಲ್ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ನಟನೆಯ ಹೊಸ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ನಾಗಶೇಖರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಶ್ರೀಕೃಷ್ಣ ಅಟ್ ಜಿ ಮೇಲ್ ಡಾಟ್ ಕಾಮ್’ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಸುದ್ದಿ ಇದೀಗ ಸುಳ್ಳಾಗಿದೆ.

ಶ್ರೀಕೃಷ್ಣ@ಜಿಮೇಲ್‌.ಕಾಮ್ ಚಿತ್ರದ ಮುಹೂರ್ತ ಕೆಲ ದಿನಗಳ ಹಿಂದೆಯಷ್ಟೆ ನೆರವೇರಿತ್ತು ಇದೀಗ ಚಿತ್ರಕ್ಕೆ ಜಾಕಿ ಸಿನಿಮಾ ಖ್ಯಾತಿಯ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಡಾರ್ಲಿಂಗ್​​ ಕೃಷ್ಣಗೆ ಜೋಡಿಯಾಗುತ್ತಾರೆ ಅನುವ ಗುಸು ಗಸು ಗಾಂಧಿನಗರದಲ್ಲಿ ಗಿರಕಿ ಹೊಡೆದಿತ್ತು . ಆದ್ರೀಗ ಡಾರ್ಲಿಂಗ್​ ಕೃಷ್ಣ ಜೊತೆ ಸ್ವೀಟಿ ನಟಿಸುತ್ತಿಲ್ಲ. ಬದಲಿಗೆ ಕ್ಯೂಟ್​ & ಟ್ರೆಡಿಷನಲ್​​ ಬ್ಯೂಟಿ, ಮಲ್ಲು ಕುಟ್ಟಿ, ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸಿನಿಮಾದಲ್ಲಿ ನಟಿಸದೆ ಇರಲು ಇದೇ ಕಾರಣ:
ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಾರೆ ಎಂದು ಹಿಂದೆ ಸುದ್ದಿ ಕೇಳಿಬಂದಿತ್ತು. ಆದರೆ ಈಗ ಅವರು ಈ ಸಿನಿಮಾ ಒಪ್ಪಿಕೊಂಡಿಲ್ಲ. ಅದಕ್ಕೆ ಕಾರಣ ಏನು? ‘ಡೇಟ್ಸ್‌ ಸಮಸ್ಯೆಯಿಂದಾಗಿ ರಾಧಿಕಾ ಕುಮಾರಸ್ವಾಮಿಯವರ ಜಾಗಕ್ಕೆ ಭಾವನಾ ಬಂದಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸದ್ಯ ಕೈತುಂಬಾ ಚಿತ್ರಗಳಿಗೆ ಒಪ್ಪಿಗೆ ಕೊಡಬೇಕಿದೆ, ಅವೆಲ್ಲಾ ಮುಗಿದ ಮೇಲಷ್ಟೇ ಹೊಸ ಚಿತ್ರಗಳಿಗೆ ಡೇಟ್ಸ್ ಕೊಡಬಹುದು. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top