fbpx
ಸಮಾಚಾರ

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೆಜಿಎಫ್-2 ಚಿತ್ರತಂಡ

ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಅಭಿಮಾನಿಗಳ ಮನ ಗೆದ್ದಿದೆ. ಅಷ್ಟೇ ಅಲ್ಲದೆ ಕೆಜಿಎಫ್-2 ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆ ಇದ್ದು, ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಚಿತ್ರತಂಡದಿಂದ ಸಿಹಿ ಸುದ್ದಿಯೊಂದು ಲಭಿಸಿದೆ. ಏನದು ಅಂತೀರಾ? ಮುಂದೆ ಓದಿ

‘ಕೆಜಿಎಫ್’ ತಂಡ ಶೂಟಿಂಗ್‌ ಶುರು ಮಾಡುವುದಕ್ಕೆ ಸಜ್ಜಾಗಿದ್ದು, ಆಗಸ್ಟ್ 15ರ ನಂತರ ಆರಂಭಗೊಳ್ಳಲಿದೆ ಎನ್ನಲಾಗಿದೆ. ‘ಕೆಜಿಎಫ್‌’ಗೆ ಕೇವಲ 25 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಮೇಜರ್ ಆದ ಒಂದು ಫೈಟ್ ದೃಶ್ಯ ಹಾಗೂ ಒಂದಷ್ಟು ಮಾತಿನ ಭಾಗದ ದೃಶ್ಯಗಳ ಚಿತ್ರೀಕರಣ ಮಾಡಬೇಕಿದೆ. ಅದುಬಿಟ್ಟರೆ, ಸಿನಿಮಾ ಶೇ.90 ಭಾಗ ಶೂಟಿಂಗ್ ಮುಕ್ತಾಯಗೊಂಡಿದೆ.

ಬೆಂಗಳೂರಿನ ಮಿನರ್ವ ಮಿಲ್ಸ್ ಹತ್ತಿರ ದೊಡ್ಡ ಸೆಟ್ ಹಾಕಲಾಗಿದ್ದು ಅಲ್ಲಿ ಇನ್ನುಳಿದ ಶೆಡ್ಯೂಲ್ ನ ಮೊದಲ ಭಾಗದ ಚಿತ್ರೀಕರಣ ನಡೆಯಲಿದೆ. ಕೆಜಿಎಫ್ ಚಾಪ್ಟರ್ 2 ತಂಡದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ ‘ಕೆಜಿಎಫ್ 2’ ಚಿತ್ರ ಹಲವು ಕಾರಣಗಳಿಂದ ಕುತೂಹಲ ಸೃಷ್ಟಿಸಿದೆ. ‘ಕೆಜಿಎಫ್ 1’ ವಿಶ್ವದಾದ್ಯಂತ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲೂ ಕೂಡ ದಾಖಲೆ ಬರೆದಿತ್ತು. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ಬಂಡವಾಳವಿದೆ. ಅಕ್ಟೋಬರ್ 23ರಂದು ಕೆಜಿಎಫ್ -2 ತೆರೆಗೆ ಬರಲಿದೆ ಎಂದು ಈ ಹಿಂದೆ ಘೋಷಿಸಿದ್ದರೂ ಕೂಡ ಇಂದಿನ ಪರಿಸ್ಥಿತಿಯಿಂದಾಗಿ ಅಂದೇ ತೆರೆಗೆ ಬರಲಿದೆಯೇ ಅಥವಾ ಮುಂದೂಡಲ್ಪಡುತ್ತದೆಯೇ ಎಂದು ಚಿತ್ರತಂಡ ಇನ್ನೂ ತೀರ್ಮಾನಿಸಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top