fbpx
ಸಮಾಚಾರ

ಶ್ರೀ ರಾಮ ಮಂದಿರ ಭೂಮಿ ಪೂಜೆ ಸಂತಸದ ಕ್ಷಣ ಭೂಮಿ ಪೂಜೆಗೆ ಜಗದ್ಗುರು ಡಾ || ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಸಂದೇಶ

ನಮ್ಮೆಲ್ಲರ ಶ್ರದ್ದಾ ಕೇಂದ್ರ ಪವಿತ್ರ ಭೂಮಿ ಅಯೋದ್ಯೆ ಯಲ್ಲಿ ಅಗೋಸ್ಟ್ 05, 2020 ಬುಧವಾರ ಮಧ್ಯಾಹ್ನ 12.15 ಅಭಿಜಿನ್ ಸು ಮಹೂರ್ತ ದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕ್ಕೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಯವರುಭೂಮಿ ಪೂಜೆ ಮೂಲಕ ಶಿಲಾನ್ಯಾಸ ನೆರವೇರಿಸಲಿರುದು ಸಂತೋಷ ದ ಸುದ್ದಿ ಈ ಕಾರ್ಯಕ್ರಮ ನಿರ್ವಿಗ್ನವಾಗಿ ನಡೆಯಲಿ ಎಂದು ಜೈನ ಕಾಶಿ ಮೂಲ ಸ್ವಾಮಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಯವರಲ್ಲಿ ಹಾಗೂ ಪಟ್ಟದ ಮಹಾ ಮಾತೇ ಅಭಿಷ್ಟ ವರ ಪ್ರಾದಾ ಯಿ ನಿ ಕೂಷ್ಮ್ಯ0ಡಿನೀ ದೇವಿ ಯವರಲ್ಲಿ ಮನಸಾ ಪ್ರಾರ್ಥಿಸಿ ಹರಸಿ ಆಶೀರ್ವದಿಸುತ್ತೇವೆ.

ಈ ಹಿಂದೆ 1528 ರಲ್ಲಿ ಶ್ರೀ ರಾಮ ಮಂದಿರ ಕೆಡವಲಾದ ಸ್ಥಳ ದಲ್ಲಿ 1885, 1989 ರಲ್ಲೂ ಭೂಮಿ ಪೂಜೆ ಶಿಲನ್ಯಾಸ ನಡೆಸಿದ್ದರೂ ಮಂದಿರ ನಿರ್ಮಾಣ ಪ್ರಕ್ರಿಯೆಗೆ ಅಡೆ ತಡೆ ಗಳಿದ್ದವು 09.11.19 ರ ಸುಪ್ರೀಂ ಕೋರ್ಟ್ ಸರ್ವಧರ್ಮಿ ಯಾರಿಗೂ ಹಿತ ವಾಗುವಂತ ತೀರ್ಪು ನೀಡಿ ನಾವೆಲ್ಲ ರೊ ನಿರಾಳವಾಗಿ ಮರ್ಯಾದ ಪುರುಷೋತ್ತಮ ಶ್ರೀ ರಾಮ ನ ಮಂದಿರ ನಿರ್ಮಾಣ ಕನಸು ನನಸಾಗುವ ಅಪೂರ್ವ ಕ್ಷಣ ಬಂದಿದೆ ಜೈನ ಬೌದ್ಧ ವೈದಿಕ ಧರ್ಮಗಳು ಪ್ರಾಚೀನ ಭಾರತೀಯ ಸಹೋದರ ಧರ್ಮಗಳಾಗಿದ್ದು 20 ನೆ ತಿರ್ಥಂಕರ ಭಗವಾನ್ ಮುನಿಸುವ್ರತರ ಕಾಲದಲ್ಲಿದ್ದ ಶ್ರೀರಾಮ ಆದರ್ಶ ರಾಜನಾಗಿ ಮುನಿಯಾಗಿ ಮೋಕ್ಷ ಪಡೆದವರು ಸಿದ್ದರೆಂದು ಜೈನ ಧರ್ಮದಲ್ಲಿ ಪೂಜಿಸ ಲಾಗುತ್ತದೆ

ಹುಂಡವಸರ್ಪಿಣಿ ಗಿಂತ ಮುಂಚೆ ಎಲ್ಲಾ ತೀರ್ಥಂಕರ ರ ಜನ್ಮ ಮೋಕ್ಷ ಅಯೋಧ್ಯೆ ಯಲ್ಲೆ ಆಗಿತ್ತು ಎಂದು ಪೌರಾಣಿಕ ನಂಬಿಕೆ ಪ್ರಥಮ ತೀರ್ಥಂಕರ ವೃಷಭನಾಥರು 4ನೇಯ ಅಭಿನಂದನನಾಥ, 5 ನೇ ಯ ಸುಮತಿನಾಥ 14ನೇ ಅನಂತನಾಥರು ಅಯೋಧ್ಯೆ ಯಲ್ಲಿ ಜನಿಸಿದ್ದ ರು ಚಕ್ರವರ್ತಿ ಭರತ ನಿಂದ ಚಂದ್ರಗುಪ್ತ ಮೌರ್ಯ ನವರೆಗೂ ಈ ಪವಿತ್ರ ಭೂಮಿಯನ್ನು ಸಂರಕ್ಷಿಸಿದ ಕೀರ್ತಿ ಇದೆ. ಇಂದ್ರಪ್ರಸ್ಥ (ದೆಹಲಿ )ದಿಂದ 555 ಕಿ. ಮೀ ದೂರ ದ ಉ. ಪ್ರ ರಾಜ್ಯ ಸರಯೂ ನದಿ ತೀರ ದ ಕೋಸಲ ದೇಶದ ರಾಜಧಾನಿ ಯೋಧ್ಯೆ ಸುಮಾರು 12 ಯೋಜನೆ ವಿಸ್ತೀರ್ಣ (80ರಿಂದ -120ಮೈಲು , ವ್ಯಾಪ್ರಿ )ಸೂರ್ಯ ವಂಶದ ರಾಜರು ಆಳಿದ ಪವಿತ್ರ ಭೂಮಿ ಯಲ್ಲಿ ಭಾರತೀಯ ಸಂಸ್ಕೃತಿ ಸಹೋದರ ತೆ ಏಕತೆ ಧರ್ಮ ಸಾಮರಸ್ಯ ಸ್ವಾಭಿಮಾನ ದ ಆತ್ಮ ನಿರ್ಭರ ಭಾರತ ದೇಶದ ರತೀಯ ದೇಗುಲ ವಾಗಿ ವಿಶ್ವದ ಸಮಸ್ತ ಶ್ರದ್ಧಾವಂತ ಭಕ್ತ ಕೋಟಿ ಭೇಟಿ ಕೊಡುವ ಭವಿಷ್ಯದ ಭಾರತೀಯ ಸಂಸ್ಕೃತಿ ಗೌರವಿಸುವ ಸರ್ವ ಧರ್ಮಿ ಯರ ಜ್ಞಾನ ಧ್ಯಾನ ಶಾಂತಿ ಯ ತಪೋ ಕೇಂದ್ರವಾಗಿ ಶ್ರೀ ರಾಮ ಮಂದಿರ ನಿರ್ಮಾಣಗೊಳ್ಳಲಿ ಎಂದು ಈ ಶುಭದಿನ ದಂದು ಅರಳಿಕಟ್ಟೆ ಸಮಾಚಾರ ದೊಂದಿಗೆ ಸಂತೋಷ ಹಂಚಿಕೊಳ್ಳಲು ಸಂತೋಷ ಪಡಿತೆವೆ ರಾಮ ಮಂದಿರ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದ ಸಾಧುಸಂತರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸರ್ವ ಸದಸ್ಯರಿಗೆ ತನು ಮನ ಧನ ದಾನ ನೀಡಿದ ನೀಡ ಲಿರುವ ಸಮಸ್ತ ಭಕ್ತ ಕೋಟಿಗೆ ಸಕಲ ಸನ್ಮ0ಗಲ ಉಂಟಾಗಲಿ.

ಭೂಮಿ ಪೂಜೆಯ ಸಂಧರ್ಭದಲ್ಲಿ ಅವರವರ ಮನೆಯಲ್ಲಿ ಶ್ರೀ ರಾಮ ಮಂದಿರ ಶೀಘ್ರ ನಿರ್ಮಾಣ ಗೊಳ್ಳಲೆಂದು ದೇವರ ಕೋಣೆ ಯಲ್ಲಿ ತುಪ್ಪ ದ ದೀಪ ಹಚ್ಚಿ ಗಂಟೆ ಬಾರಿಸಿ, ಶಂಖ ಊದಿ ಮಹಾ ಮಂಗಳ ಆರತಿ ಬೆಳಗೊಣ ರಾತ್ರಿ ಹೊಸ್ತಿಲಲ್ಲಿ ದೀಪ ಬೆಳಗಿ ನಿರ್ವಿಗ್ನ ಕಾರ್ಯಕ್ರಮ ಕ್ಕೆ ನಮ್ಮ ಆರಾಧ್ಯ ಭಗವಂತನ ನ್ನು ಪ್ರಾರ್ಥಿಸೋಣ ಶಾಂತಿ ಯಿಂದ ಮನೆ ಯಲ್ಲಿದ್ದು ದೂರ ದರ್ಶನ ಮೂಲಕ ಭೂಮಿ ಪೂಜೆ ಯ ಧಾರ್ಮಿಕ ವಿಧಿ ವೀಕ್ಷಿಸಿ ಸೋಣ

ಇತೀ
ಭದ್ರಂ ಶುಭ0 ಮಂಗಳಂ
ಜಗದ್ಗುರು ಡಾ || ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top