fbpx
ಸಮಾಚಾರ

ಮತ್ತೆ ಕಡೆಗಣನೆಗೆ ಒಳಗಾದ ಜಾವಗಲ್ ಶ್ರೀನಾಥ್: ಪುಸ್ತಕದ ವಿರುದ್ಧ ದೊಡ್ಡ ಗಣೇಶ್ ಕಿಡಿ

ಭಾರತೀಯ ಕ್ರಿಕೆಟ್‌ನ‌ ಶ್ರೇಷ್ಠ ವೇಗದ ಬೌಲರ್‌ಗಳ ಸಾಲಿನಲ್ಲಿ ಕನ್ನಡಿಗ ಜಾವಗಲ್‌ ಶ್ರೀನಾಥ್‌ ಕೂಡ ನಿಲ್ಲುತ್ತಾರೆ. ಕ್ರಿಕೆಟ್ ಜೀವನದಲ್ಲಿ 500 ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಬೌಲರ್​ಗೆ ಸಿಗಬೇಕಾದ ಅರ್ಹ ಗೌರವ ಶ್ರೀನಾಥ್ ಅವರಿಗೆ ಸಿಕ್ಕಿಲ್ಲ ಎಂಬುದು ಕ್ರಿಕೆಟ್ ಪ್ರೇಮಿಗಳ ನೋವು..

ಸದ್ಯ ಭಾರತ ತಂಡವು ವಿಶ್ವದ ಅತ್ಯಂತ ಉತ್ತಮ ಬೌಲಿಂಗ್ ಘಟಕಗಳಲ್ಲಿ ಒಂದಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮುಂತಾದವರು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭಾರತದಲ್ಲಿ ವೇಗದ ಬೌಲಿಂಗ್ ನಲ್ಲಿ ಕ್ರಾಂತಿ ಮಾಡಿದವರು ಕನ್ನಡಿಗ ಜಾವಗಲ್ ಶ್ರೀನಾಥ್. ವೇಗದ ಬೌಲಿಂಗ್‍ಗೆ ಸಹಕಾರಿಯಲ್ಲದ ಪಿಚ್‍ಗಳಲ್ಲೂ ಅವರು ಅದ್ಭುತ ಸ್ಪೆಲ್ ಮಾಡುತ್ತಿದ್ದರು. ಸರಿ ಸುಮಾರು ಒಂದು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಗೆ ಶ್ರೀನಾಥ್ ಕೊಡುಗೆ ನೀಡಿದ್ದಾರೆ. ಆದರೆ ಅತ್ಯುತ್ತಮ ಪಂದ್ಯಗಳ ಬಗ್ಗೆ ಚರ್ಚಿಸುವಾಗ ಶ್ರೀನಾಥ್ ಹೆಸರು ಕೇಳಿ ಬರುವುದು ವಿರಳ. ಶ್ರೀನಾಥ್ ಅವರ ಸಾಧನೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಪದೇ ಪದೇ ಕೇಳಿಬರುತ್ತಲೇ ಇರುತ್ತದೆ.

ಇದೀಗ ಇಂಥಹುದೇ ಮತ್ತೊಂದು ಘಟನೆ ನಡೆದಿದೆ. ಭಾರತೀಯ ವೇಗದ ಬೌಲರ್ ಗಳ ಕುರಿತಾಗಿ
ಪುಸ್ತಕವೊಂದು ಬಿಡುಗಡೆಯಾಗಿದ್ದು ಆಪುಸ್ತಕದ ಕವರ್ ಫೋಟೋದಲ್ಲಿ ಶ್ರೀನಾಥ್ ಅವರ ಭಾವಚಿತ್ರವೇ ಇಲ್ಲ.ಬದಲಾಗಿ ಕಪಿಲ್ ದೇವ್, ಜಹೀರ್ ಖಾನ್ ಮತ್ತು ಜಸ್ಪ್ರೀತ್ ಬುಮ್ರಾ ರ ಫೋಟೋಗಳನ್ನು ಮಾತ್ರ ಹಾಕಲಾಗಿದೆ.

 

 

ಈ ವಿಚಾರವಾಗಿ ಕರ್ನಾಟಕ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಪುಸ್ತಕದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿರುವ ದೊಡ್ಡ ಗಣೇಶ್ “ನೀವು ಪುಸ್ತಕಕ್ಕೆ ‘ಸ್ಪೀಡ್ ಮರ್ಚೆಂಟ್ಸ್ (ವೇಗದ ವ್ಯಾಪಾರಿಗಳು)’ ಎಂದು ಹೆಸರಿಸಿದ್ದೀರಿ. ಆದರೆ ಭಾರತದ ಅತಿ ವೇಗದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರ ಫೋಟೋವನ್ನು ಕವರ್ ಪೇಜ್ ನಲ್ಲಿ ಹಾಕಿಲ್ಲ. ವೇಗದ ಹೊರತಾಗಿ ಶ್ರೀನಾಥ್ 550 ಅಂತರಾಷ್ಟ್ರೀಯ ವಿಕೆಟ್ ಗಳನ್ನ ಸಹ ಪಡೆದಿದ್ದಾರೆ. ಇದು ಒಂದು ರೀತಿ ರೋಹಿತ್ ಗಾಗಿ ಸಚಿನ್ ಅವರನ್ನು ನಿರ್ಲಕ್ಷಿಸುವ ಈ ರೀತಿಯ ವಿಷಯ. ಶ್ರೀನಾಥ್ ಅವರು ಹೀರೋ ಆಗಿ ಉಳಿಯಲಿದ್ದಾರೆ” ಎಂದು ಖಾರವಾಗಿ ಬರೆದುಕೊಂಡಿದ್ದಾರೆ.

ಅಂದಹಾಗೆ ಟೀಮ್ ಇಂಡಿಯಾ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಶ್ರೀನಾಥ್ 236 ವಿಕೆಟ್ ಉರುಳಿಸಿದ್ದರು. ಹಾಗೆಯೇ 86 ಕ್ಕೆ 8 ವಿಕೆಟ್ ಅವರ ಟೆಸ್ಟ್ ಇನಿಂಗ್ಸ್​ವೊಂದರ ಅತ್ಯುತ್ತಮ ಸಾಧನೆ.229 ಏಕದಿನ ಪಂದ್ಯಗಳಲ್ಲಿ ಜಾವಗಲ್ ಶ್ರೀನಾಥ್ ಅವರು ಒಟ್ಟು 315 ವಿಕೆಟ್ ಕಬಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top