fbpx
ಸಮಾಚಾರ

ನಿಮಗೆ ಗೊತ್ತೆ? IAS‌ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್‌ ಪಡೆದ ಕೀರ್ತನಾ ಒಂದು ಕಾಲದ ಸ್ಟಾರ್‌ ಬಾಲನಟಿ!

ಶಿವರಾಜ್‌ಕುಮಾರ್‌, ಉಪೇಂದ್ರ, ಶಶಿಕುಮಾರ್‌, ರಮೇಶ್‌ ಅರವಿಂದ್‌, ಮಾಲಾಶ್ರೀ, ಶಿಲ್ಪಾ, ಸಿತಾರಾ… ಹೀಗೆ ಒಂದು ಕಾಲದಲ್ಲಿ ಕನ್ನಡ ಚಿತ್ರಗಳಲ್ಲಿ ದೊಡ್ಡ ನಟನಟಿಯರ ಜತೆಗೆಲ್ಲ ತೆರೆ ಹಂಚಿಕೊಂಡು ಮುದ್ದು ಮಾತುಗಳಿಂದ ಮನೆಮಾತಾಗಿದ್ದ ಅಂದಿನ ಬಾಲನಟಿ ಕೀರ್ತನಾ ಇದೀಗ ಐಎಎಸ್‌ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್‌‌ನೊಂದಿಗೆ ಉತ್ತೀರ್ಣರಾಗಿದ್ದಾರೆ.

ಕೀರ್ತನಾ ಸಿನಿಮಾ ರಂಗ ಹಾಗೂ ಕಿರುತೆರೆಯಲ್ಲಿ ಹಲವು ವರ್ಷಗಳ ಹಿಂದೆಯೇ ಪ್ರೇಕ್ಷಕರ ಮನಸೆಳೆಡಿದ್ದರು. ನಾಲ್ಕನೇ ವಯಸ್ಸಿಗೆ ನಟ ಶಿವರಾಜ್ ಕುಮಾರ್ ಅವರ ‘ದೊರೆ’ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ಅದಾದ ಬಳಿಕ ಕರ್ಪೂರದ ಗೊಂಬೆ, ಮುದ್ದಿನ ಅಳಿಯ, ಉಪೇಂದ್ರ, ಎ, ಹಬ್ಬ, ಕಾನೂರು ಹೆಗ್ಗಡತಿ, ಲೇಡಿ ಕಮಿಷನರ್, ಸರ್ಕಲ್ ಇನ್ಸ್​ಪೆಕ್ಟರ್​ ಸೇರಿದಂತೆ 32ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೆ ಚಿಗುರು, ಜನನಿ, ಪುಟಾಣಿ ಏಜೆಂಟ್ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಕೂಡ ಕೀರ್ತನ ನಟಿಸಿದ್ದಾರೆ.

ಚಿತ್ರರಂಗದಲ್ಲಿ ಬಾಲನಟಿಯಾಗಿ ಮಾಡಿದ ಸಾಧನೆಗೆ ಕೇಂದ್ರ ಸರ್ಕಾರದಿಂದ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿತ್ತು. ಇನ್ನೂ ಹಲವು ಪ್ರಶಸ್ತಿಗಳು ಸಿಕ್ಕಿದ್ದವು.

ಅನೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು, ಬೇಬಿ ಕೀರ್ತನಾ ಎಂದೇ ಜನಪ್ರಿಯರಾಗಿದ್ದ ಆ ನಟಿ ಈಗ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದಾರೆ. ತಮ್ಮ 6 ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ ಕೀರ್ತನಾ ಸದ್ಯ ಬಿಬಿಎಂಪಿ ಕೊವೀಡ್ ಕೇರ್ ಸೆಂಟರ್ ನಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top