fbpx
ಸಮಾಚಾರ

“ಕಾಶಿ, ಮಥುರಾಗಳಲ್ಲೂ ಮಸೀದಿ ಧ್ವಂಸ ಮಾಡಿ ಮಂದಿರ ನಿರ್ಮಾಣ ಮಾಡಬೇಕು; ಅದನ್ನು ಮಾಡಿಯೇ ತೀರುತ್ತೇವೆ” ಕೆಎಸ್ ಈಶ್ವರಪ್ಪ

ಅಯೋಧ್ಯೆಯಲ್ಲಿ ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಬಹುಸಂಖ್ಯಾತ ಹಿಂದೂಗಳ ಆಶಯವಾಗಿತ್ತು. ಇಂದು ನಮ್ಮೆಲ್ಲರ ಆಸೆ ಈಡೇರಿದೆ. ಆದರೆ ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಇರುವ ಮಸೀದಿ ಸಹ ಧ್ವಂಸ ಆಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆ ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧರ್ಮ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಾಶಿ ವಿಶ್ವನಾಥನ ಜಾಗ, ಮಥುರಾ ಕೃಷ್ಣನ ಸ್ಥಳವಾಗಿದ್ದು, ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಮಗೆ ಗುಲಾಮಗಿರಿ ಭಾವ ಕಾಡುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ ಎಂದು ತಿಳಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿನ ಹಲವು ದೇವಸ್ಥಾನಗಳು ಧ್ವಂಸವಾಗಿವೆ. ಗುಲಾಮಗಿರಿಯ ಸಂತೇತವಾದ ಅಯೋಧ್ಯೆಯ ಮಸೀದಿ ತೆರವುಗೊಳಿಸಿದಂತೆ ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಬೇಕಿದೆ. ಎಲ್ಲಾ ಶ್ರದ್ಧಾ ಕೇಂದ್ರಗಳೂ ಮಸೀದಿಗಳಿಂದ ಮುಕ್ತವಾಗಬೇಕಿದೆ. ಕಾಶಿ ಹಾಗೂ ಮಥುರಾದಲ್ಲಿ ಇಂದಲ್ಲ, ನಾಳೆ ಮಸೀದಿ ಧ್ವಂಸ ಆಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top