fbpx
ಸಮಾಚಾರ

‘ಸ್ವಲ್ಪ ಸ್ವಲ್ಪ’ ಅಂತಾನೇ ಕನ್ನಡಿಗರ ಮನಗೆದ್ದ ನಟಿ ಅನುಷ್ಕಾ ಶರ್ಮಾ

ಬಾಲಿವುಡ್ ಖ್ಯಾತ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯ. ತಮ್ಮ ಹಾಗೂ ಪತಿ ವಿರಾಟ್ ಕೊಹ್ಲಿಯ ಚಿತ್ರಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ.

ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತುಕತೆ ನಡೆಸ್ತಿದ್ದಾರೆ. ಹೀಗೆ ನಡೆಯುತ್ತಿದ್ದ ಸಂವಾದದಲ್ಲಿ ಅನುಷ್ಕಾ ಕೊಟ್ಟ ಉತ್ತರ ಕನ್ನಡಿಗರ ಮನಸ್ಸು ಗೆದ್ದಿದೆ. ಹೌದು, ಏನಾದ್ರು ಇಂಟ್ಟೆಸ್ಟಿಂಗ್​ ಪ್ರಶ್ನೆ ಕೇಳಿ ಅಂತ ಅನುಷ್ಕಾ ಇನ್​ಸ್ಟ್ರಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಯೊಬ್ಬರು ನಿಮಗೆ ಕನ್ನಡ ಬರುತ್ತಾ? ಅಂತ ಕೇಳಿದ್ದಾರೆ.

 

 

ಇದಕ್ಕೆ ಕೂಡಲೇ ಸ್ಪಂದಿಸಿದ್ದ ಅನುಷ್ಕಾ ‘ಸ್ವಲ್ಪ ಸ್ವಲ್ಪ’ ಅಂತ ರಿಪ್ಲೇ ಮಾಡಿದ್ದಾರೆ. ಅನುಷ್ಕಾರ ಈ ರಿಪ್ಲೇ ಸ್ಕ್ರೀನ್​ ಶಾಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಆ ಎರಡು ಪದಕ್ಕೆ ಕನ್ನಡಿಗರು ಖುಷಿಯಾಗಿದ್ದಾರೆ.

ಅಂದಹಾಗೆ ಉತ್ತರ ಭಾರತದ ಹುಡುಗಿಯಾಗಿರುವ ಅನುಷ್ಕಾ ಶರ್ಮಾ ತಮ್ಮ ಪದವಿಯನ್ನು ಪಡೆದಿರುವುದು ಬೆಂಗಳೂರಿನಲ್ಲೇ. ಹಾಗಾಗಿ ಬೆಂಗಳೂರಿನ ನಂಟು ಅಲ್ಲಿಂದ ಶುರುವಾಗಿದ್ದು ಎನ್ನಬಹುದು.

ಬೆಂಗಳೂರಿನಲ್ಲೇ ಓದಿದ ಹುಡುಗಿಗೆ ಕನ್ನಡ ‘ಸ್ವಲ್ಪ ಸ್ವಲ್ಪ’ ಅಷ್ಟೇ ಗೊತ್ತು ಎನ್ನುವುದು ಸಮಾಧಾನದ ವಿಷಯವೇ. ಯಾಕೆಂದರೆ ಇಲ್ಲಿಯೇ ಹುಟ್ಟಿ ಬೆಳೆದ ಎಷ್ಟೋ ಜನ ಕನ್ನಡ್ ಗೊತ್ತಿಲ್ಲ, ಐ ಡೋಂಟ್ ನೋ ಕನ್ನಡ, ಕನ್ನಡ ತೆಲೀದು, ಕನ್ನಡ್ ತೆರಿಯಾದ್ ಎನ್ನುತ್ತಿರುವಾಗ ಅನುಷ್ಕಾ ಶರ್ಮಾ ಸ್ವಲ್ಪ ಕನ್ನಡ ಗೊತ್ತು ಎಂದು ಹೇಳಿದ್ದೆ ಖುಷಿಯ ವಿಚಾರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top