fbpx
ಸಮಾಚಾರ

ಮೊದಲ ಮಗುವಿನ ಸೀಮಂತದ ಸುಂದರ ಫೋಟೋಗಳನ್ನ ಶೇರ್ ಮಾಡಿದ ನಟಿ ಮಾಲಾಶ್ರೀ

ಮಾಲಾಶ್ರೀ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾಲಾಶ್ರೀ, ತೆಲುಗು -ತಮಿಳಿನಲ್ಲಿ ಮಿಂಚಿ ಸ್ಯಾಂಡಲ್​ವುಡ್​ನಲ್ಲಿ ನೆಲಯೂರಿದ ಚೆಲುವೆ. ಸ್ಯಾಂಡಲ್​ವುಡ್​ನ ಕನಸಿನ ರಾಣಿ ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಆದರೂ ಆಗಾಗ ತಮ್ಮ ಅಪರೂಪದ ಫೋಟೋಗಳ ಜೊತೆಗೆ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಇದೀಗ ಮಾಲಾಶ್ರೀ ತಮ್ಮ ಜೀವನಕ್ಕೆ ಸಂಬಂಧಿಸಿದ ಅಪರೂಪದ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

ನಟಿ ಮಾಲಾಶ್ರೀ ತಮ್ಮ ಮೊದಲ ಮಗುವಿನ ಸೀಮಂತದ ಸಂದರ್ಭದ ಸುಂದರ ಕ್ಷಣಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳು ಅನನ್ಯಾ 2001ರಲ್ಲಿ ಜನಿಸಿದ್ದರು. ಅದಕ್ಕೂ ಮುನ್ನ ಸೀಮಂತ ಶಾಸ್ತ್ರ ನಡೆದಿತ್ತು. ಅಂದು ತಮ್ಮ ಪತಿ ರಾಮು ಅವರ ಜೊತೆ ಕ್ಲಿಕ್ಕಿಸಿಕೊಂಡ ಅಪರೂಪದ ಫೋಟೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ನಿರ್ಮಾಪಕ ರಾಮು ಅವರನ್ನು ವಿವಾಹವಾಗಿರುವ ಮಾಲಾಶ್ರೀಗೆ ಅನನ್ಯಾ ಮತ್ತು ಆರ್ಯನ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾಗ ಮಾಡಿದ್ದ ಸೀಮಂತ ಶಾಸ್ತ್ರದ ಫೋಟೋಗಳನ್ನು ಮಾಲಾಶ್ರೀ ಈಗ ಹಂಚಿಕೊಂಡಿದ್ದಾರೆ. ಪತಿ ರಾಮು ಕುಂಕುಮ ಹಚ್ಚಿ, ಆಶೀರ್ವಾದ ಮಾಡುತ್ತಿರುವ ಫೋಟೋ ಸೇರಿದಂತೆ ಕೆಲ ಅಪರೂಪದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮಾಲಾಶ್ರೀ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top