fbpx
ಸಮಾಚಾರ

ಅವಕಾಶಕ್ಕಾಗಿ ನಾನು ಎಂದಿಗೂ ಹೀರೋಗಳ ಜೊತೆ ಮಲಗಲಿಲ್ಲ; ಕೆಜಿಎಫ್ ನಟಿ ರವೀನಾ ಟಂಡನ್ ಸ್ಪೋಟಕ ಹೇಳಿಕೆ

ಸುಶಾಂತ್‌ ಸಿಂಗ್‌ ರಜಪೂತ್ ಸಾವಿನ ನಂತರ ಹಲವರು ಅನೇಕ ವಿಚಾರಗಳನ್ನು ಬಾಯಿ ಬಿಡುತ್ತಿದ್ದಾರೆ. ಆ ಪೈಕಿ ನಟಿ ರವೀನಾ ಟಂಡನ್ ಅವರು ಕೆಲವು ಕಟು ಸತ್ಯಗಳನ್ನು ಹೊರಹಾಕುತ್ತಿದ್ದಾರೆ. ಬಾಲಿವುಡ್‌ನ ಅನೇಕ ರಹಸ್ಯಗಳನ್ನು ಅವರು ಬಹಿರಂಗ ಪಡಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇನ್ನಷ್ಟು ಕಹಿ ಸತ್ಯಗಳನ್ನು ತೆರೆದಿಟ್ಟಿದ್ದಾರೆ.

90 ರ ದಶಕದಲ್ಲಿ ಟಾಪ್ ನಾಯಕಿಯಾಗಿದ್ದ ರವೀನಾ ಟಂಡನ್ ವಿರುದ್ಧದ ಆಗೆಲ್ಲಾ ಕೆಟ್ಟ-ಕೆಟ್ಟ ಆರ್ಟಿಕಲ್‌ಗಳು ಕೆಲವು ಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿದ್ದವಂತೆ. ನಾನು ನನ್ನದೇ ಆದ ವೃತ್ತಿ ಶಿಸ್ತು ಪಾಲಿಸುತ್ತಿದ್ದೆ. ಯಾರೊಬ್ಬರ ಕೈಗೊಂಬೆ ಆಗಿರಲಿಲ್ಲ ಹಾಗಾಗಿ ನನ್ನ ಮೇಲೆ ಉದ್ಯಮದವರೇ ಕೆಟ್ಟದಾಗಿ ಬರೆಸುತ್ತಿದ್ದರು ಎಂದಿದ್ದಾರೆ ರವೀನಾ.

ನಾನು ಬಾಲಿವುಡ್‌ನಲ್ಲಿ ವೃತ್ತಿ ಜೀವನ ಆರಂಭಿಸಿದಾಗ ಅಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿದ್ದ ಸಮಯವಾಗಿತ್ತದು. ಆದರೆ ಯಾವತ್ತೂ ಅವಕಾಶಕ್ಕಾಗಿ ನಾನು ನಟರೊಂದಿಗೆ ಮಲಗಲಿಲ್ಲ. ನನಗೆ ಇಂಡಸ್ಟ್ರಿಯಲ್ಲಿ ಯಾವುದೇ ಕ್ಯಾಂಪ್ ಇರಲಿಲ್ಲ, ಯಾರೂ ಗಾಡ್‌ ಫಾದರ್ ಕೂಡಾ ಇರಲಿಲ್ಲ. ಹಿರೋಗಳ ಬೇಡಿಕೆ ನಿರಾಕರಿಸುತ್ತಿದ್ದ ಕಾರಣ ನನ್ನನ್ನು ಅಹಂಕಾರಿ ಎಂದೂ ಕರೆಯುತ್ತಿದ್ದರು ಎಂದಿದ್ದಾರೆ.

ಇನ್ನು, ಈ ಗುಂಪುಗಾರಿಕೆಯಲ್ಲಿ ಬಾಲಿವುಡ್ ಪತ್ರಕರ್ತೆಯರು ಕೂಡ ಭಾಗಿಯಾಗುತ್ತಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ತನ್ನ ಪ್ರಾಮಾಣಿಕತೆಯಿಂದಲೇ ಬಾಲಿವುಡ್‌ನಲ್ಲಿ ನಾನು ಹಲವಾರು ಸಿನಿಮಾ ಅವಕಾಶಗಳನ್ನೂ ಕಳೆದುಕೊಂಡಿದ್ದೆ ಎಂದು ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top