fbpx
ಸಮಾಚಾರ

ಕಿಡಿಗೇಡಿಗಳ ವಕ್ರ ದೃಷ್ಟಿಗೆ ತುತ್ತಾದ ನಟಿ ಶಾನ್ವಿ ಶ್ರೀವಾಸ್ತವ

ಸಿನಿಮಾ ಮತ್ತು ಸೀರಿಯಲ್ ನಟ ನಟಿಯರ ಪಾಲಿಗೆ ಫೇಸ್ ಬುಕ್‌ನಂಥಾ ಸಾಮಾಜಿಕ ಜಾಲ ತಾಣಗಳು ಕಂಟಕವಾಗುತ್ತಿವೆಯಾ? ಇತ್ತೀಚೆಗೆ ನಡೆಯುತ್ತಿರೋ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರವೇ ಪಕ್ಕಾ ಆಗುವಂತಿದೆ. ಈ ಹಿಂದೆ ಶ್ರುತಿ ಹರಿಹರನ್, ಮೇಘನಾ ಗಾವ್ಕರ್ ಫೇಕ್ ಫೇಸ್ ಬುಕ್ ಅಕೌಂಟು ಕ್ರಿಯೇಟ್ ಮಾಡಿದ್ದ ಕಿಡಿಗೇಡಿಗಳು ಕೊಡಬಾರದ ಕಾಟ ಕೊಟ್ಟಿದ್ದರು. ಈಗ ನಟಿ ಶಾನ್ವಿ ಶ್ರೀವಾತ್ಸವ್ ಅವರ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.,

 

 

ನಿನ್ನೆಯಿಂದ ನಟಿ ಶಾನ್ವಿ ಶ್ರೀವಾಸ್ತವ ಫೇಸ್‌ಬುಕ್ ಖಾತೆಯಿಂದ ಅನೇಕ ವಿಡಿಯೋಗಳು, ಫೋಟೋಗಳು ಪೋಸ್ಟ್ ಆಗುತ್ತಿದ್ದವು. ಯಾಕೆ ಹೀಗೆ ಶಾನ್ವಿ ಒಂದಾದ ಮೇಲೆ ಒಂದರಂತೆ ಈ ರೀತಿ ಪೋಸ್ಟ್ ಅಪ್‌ಲೋಡ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕೆಲ ನೆಟ್ಟಿಗರಿಗೆ ಕಾಡಿದ್ದಂತೂ ಸುಳ್ಳಲ್ಲ. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಈ ಬಗ್ಗೆ ಶಾನ್ವಿ ಟ್ವಿಟರ್‌ನಲ್ಲಿ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.

ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು, ಇದನ್ನು ಆದಷ್ಟು ಬೇಗ ಸರಿ ಮಾಡಲಿರುವುದಾಗಿ ಶಾನ್ವಿ ತಿಳಿಸಿದ್ದಾರೆ. ಫೇಸ್ ಬುಕ್ ಖಾತೆ ನೋಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಲಿಂಕ್ ವೊಂದನ್ನು ಆಕಸ್ಮಿಕವಾಗಿ ಕ್ಲಿಕ್ ಮಾಡಿದ್ದೆ. ಕೂಡಲೇ ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಯಿತು. ನನ್ನ ಖಾತೆ ಹ್ಯಾಕ್ ಆಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಮತ್ತೆ ಖಾತೆಯನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಯತ್ನಿಸಿದೆ ಅದು ಸಾಧ್ಯವಾಗಿಲ್ಲ. ಇದು ಕಲಿಕೆಯ ಅನುಭವವಾಗಿದೆ. ಲಾಕ್ಡೌನ್ ಸಾಕಷ್ಟು ಕಲಿಸಿದೆ ಎಂದು ಶಾನ್ವಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top