fbpx
ಸಮಾಚಾರ

ಬಾಲಿವುಡ್‍ಗೆ ವಿದಾಯ ಹೇಳಿ ಕರ್ನಾಟಕದ ಕೊಡಗಿನಲ್ಲಿ ಸಾವಯವ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

ದೇಶಾದ್ಯಂತ ಕುತೂಹಲ ಕೆರಳಿಸಿದೆ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ. ದಿನದಿಂದ ದಿನಕ್ಕೆ ಈ ಕೇಸ್‌ನಲ್ಲಿ ಹೊಸ ಹೊಸ ತಿರುವುಗಳು ಸಿಗುತ್ತಿವೆ. ಸುಶಾಂತ್ ಸಾವಿಗೆ ಕಾರಣ ಆದವರು ಯಾರು ಎಂಬ ಸತ್ಯವನ್ನು ಬಯಲಿಗೆ ಎಳೆಯುವಲ್ಲಿ ತನಿಖಾಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ. ಈ ಮದ್ಯೆ ಸುಶಾಂತ್ ಬದುಕಿದ್ದಾಗ ನಡೆದ ಘಟನೆಗಳು ಒಂದೊಂದೇ ಆಚೆ ಬರುತ್ತಿವೆ.

ಸುಶಾಂತ್ ಸಿಂಗ್ ಸಾವನ್ನಪ್ಪಿದ ಒಂದು ತಿಂಗಳ ನಂತರ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್, ರಿಯಾ ವಿರುದ್ಧ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ನಟ ಬಾಲಿವುಡ್‍ಗೆ ಬೈ ಹೇಳಿ ಸಾವಯವ ಕೃಷಿಯನ್ನು ಮಾಡಲು ಕೊಡಗಿಗೆ ಹೋಗಲು ಬಯಸಿದ್ದರು. ಆದರೆ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಕೊಡಗಿಗೆ ಹೋಗಿ ಕೃಷಿ ಮಾಡಲು ಅವಕಾಶ ನೀಡಲಿಲ್ಲ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಮಗ ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ತ್ಯಜಿಸಿ ಕರ್ನಾಟಕದ ಕೂರ್ಗ್‌ನಲ್ಲಿ ನೆಲೆಸುವ ಯೋಜನೆ ಹಾಕಿಕೊಂಡಿದ್ದ. ಅಲ್ಲದೇ ಸ್ನೇಹಿತ ಮಹೇಶ್ ಶೆಟ್ಟಿ ಜೊತೆ ಸೇರಿ ಸಾವಯವ ಕೃಷಿ ಮಾಡುವ ಯೋಚನೆಯೂ ಅವನಿಗಿತ್ತು. ಆದರೆ ರಿಯಾ ನನ್ನ ಮಗನಿಗೆ ಅವನ ಹಳೆಯ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಕೊಡುತ್ತೇನೆ, ನೀನು ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸುತ್ತೇನೆ. ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು’ ಎಂದು ಸುಶಾಂತ್ ತಂದೆ ಹೇಳಿಕೆ ನೀಡಿದ್ದಾರೆ.

ಅನೇಕ ಬಾರಿ ಸುಶಾಂತ್ ಅವರಿಂದ ರಿಯಾ ಮತ್ತು ಆಕೆಯ ಸಹೋದರ ಹಣ ಪಡೆದುಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸುಶಾಂತ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಯಿತು. ಸುಶಾಂತ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದೇ ರಿಯಾ ಚಕ್ರವರ್ತಿ ಎಂದು ಎಂದು ಕೆ.ಕೆ. ಸಿಂಗ್‌ ಆರೋಪ ಹೊರಿಸಿದ್ದಾರೆ. ‘ಯಾವಾಗ ಸುಶಾಂತ್‌ ತನ್ನ ಮಾತು ಕೇಳುವುದಿಲ್ಲ ಎಂದು ಗೊತ್ತಾಯಿತೋ ಆಗಲೇ ಅವರ ಹಣ, ಕ್ರೆಡಿಟ್‌ ಕಾರ್ಡ್‌, ಆಭರಣ ಮತ್ತು ಲ್ಯಾಪ್‌ಟಾಪ್‌ ತೆಗೆದುಕೊಂಡು ರಿಯಾ ಮನೆಬಿಟ್ಟು ಹೋದರು’ ಎಂದಿದ್ದಾರೆ ಸುಶಾಂತ್‌ ತಂದೆ.

ವಿರಾಜಪೇಟೆಯಲ್ಲಿ ಸಾವಯವ ಕೃಷಿಗೆ ಸಿದ್ಧತೆ
ಸುಶಾಂತ್‌ ಸಿಂಗ್‌ ಅವರು ಕೊಡಗು ಜಿಲ್ಲೆಗೆ ತನ್ನ ಗೆಳೆಯ ಮಹೇಶ್‌ನೊಂದಿಗೆ ಕಳೆದ ಕೆಲವು ವರ್ಷಗಳ ಹಿಂದೆ ಪ್ರವಾಸಕ್ಕೆ ಆಗಮಿಸಿ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಚಿತ್ರರಂಗ ತ್ಯಜಿಸಿ ಕೊಡಗಿನಲ್ಲಿ ಸಾವಯವ ಕೃಷಿ ಮಾಡುವ ಯೋಜನೆ ರೂಪಿಸುವ ಸಲುವಾಗಿ ವಿರಾಜಪೇಟೆ ತಾಲೂಕಿನಲ್ಲಿ ಭೂಮಿ ಖರೀದಿ ಸಿದ್ಧತೆ ಮಾಡಿಕೊಂಡಿಕೊಂಡಿದ್ದರು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top