fbpx
ಸಮಾಚಾರ

“ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ.” ಸಿಟಿ ರವಿ ವಾಗ್ದಾಳಿ

ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಕೈ ನಾಯಕರ ವಿರುದ್ಧ ಕಾಲೆಳೆಯುತ್ತಿದ್ದಾರೆ.

ಟ್ವೀಟ್‌ ಮಾಡಿದ ರವಿಯವರು, ರಾಮ ಮಂದಿರ ಭೂಮಿ ಪೂಜೆಯ ನೇರ ಪ್ರಸಾರ ನೋಡಿದವರು 16 ಕೋಟಿ ಜನ. ಅಂದರೆ ಕಾಂಗ್ರೆಸ್ ಪಕ್ಷ 2019 ರಲ್ಲಿ ಪಡೆದ ಮತಗಳಿಗಿಂತ ಶೇ.6ರಷ್ಟು ಹೆಚ್ಚು ಎಂದು ಬರೆದುಕೊಂಡಿದ್ದಾರೆ.

 

 

ಅಂದಹಾಗೆ ಇದೇ ತಿಂಗಳು 05ರಂದು ಆಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ದೇಶಾದ್ಯಂತ ಸುಮಾರು 160 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top