fbpx
ಸಮಾಚಾರ

ತನ್ನ ಮಗುವಿನ ಹೆಸರನ್ನು ರಿವೀಲ್ ಮಾಡಿದ ಹಾರ್ದಿಕ್ ಪಾಂಡ್ಯ

ಟೀ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಹಾರ್ದಿಕ್ ಪಾಂಡ್ಯ ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಮಗು ಹುಟ್ಟಿದ ವಾರದಲ್ಲಿಯೇ ಹಾರ್ದಿಕ್ ಪಾಂಡ್ಯ ನಾಮಕರಣ ಮಾಡಿದ್ದಾರೆ. ಮಗುವಿಗೆ ಮಹರ್ಷಿಯೊಬ್ಬರ ಹೆಸರನ್ನು ಇರಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಮಗುವಿನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಫೋಟೊಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಅಭಿಮಾನಿಗಳು ಅಲ್ಲಿಯೇ ಮಗುವಿನ ಹೆಸರು ಇರುವುದನ್ನು ಕಂಡು ಹಿಡಿದಿದ್ದಾರೆ.

ಹಾಸ್ಪಿಟಲ್​ನಿಂದ ಹೊರಡುವ ಮುನ್ನ ಆಸ್ಪತ್ರೆ ಸಿಬ್ಬಂದಿಗಳು ಕೇಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಈ ಕೇಕ್ ಕಟ್ಟಿಂಗ್​ನೊಂದಿಗೆ ಜೂನಿಯರ್ ಪಾಂಡ್ಯರ ಹೆಸರು ಕೂಡ ರಿವೀಲ್ ಆಗಿದೆ. ‘ವೆಲ್‌ಕಮ್ ಪಾಂಡ್ಯ ಜೂನಿಯರ್ ಅಗಸ್ತ್ಯ‘ ಎಂದು ಹೆಸರಿನ ಟ್ಯಾಗ್​ ಕೇಕ್​ಗೆ ನೀಡಿರುವುದರಿಂದ ಅದೇ ಮಗುವಿನ ಹೆಸರು ಎಂದು ಹೇಳಲಾಗುತ್ತಿದೆ. ಹೀಗಾಗಿ ಪಾಂಡ್ಯ ಜೂನಿಯರ್‌ಗೆ ‘ಅಗಸ್ತ್ಯ’ ಹೆಸರು ಇರಿಸಿರುವುದು ಖಾತರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top