fbpx
ಸಮಾಚಾರ

ಸರ್ಕಾರಿ ಆಸ್ಪತ್ರೆಗೆ ರೂ.25 ಲಕ್ಷ ದೇಣಿಗೆ ನೀಡಿ ಟೀಕಾಕಾರರಿಗೆ ತಿರುಗೇಟು ನೀಡಿದ ಖ್ಯಾತ ನಟಿ ಜ್ಯೋತಿಕಾ!

ತಮಿಳು ನಟ ಸೂರ್ಯ ಮತ್ತು ಅವರ ಪತ್ನಿ ನಟಿ ಜ್ಯೋತಿಕಾ ಸಿನಿಮಾ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಸದಾ ಸುದ್ದಿಯಲ್ಲಿ ಇರುತ್ತಾರೆ. ಕಾಲಿವುಡ್‌ನ ಮಾದರಿ ದಂಪತಿಗಳಾಗಿ ಇವರು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ನಟಿ ಜ್ಯೋತಿಕಾ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವಾರ್ಡ್‌ ಫಂಕ್ಷನ್‌ವೊಂದರಲ್ಲಿ ಇವರು ಮಾತನಾಡಿದ ಬೋಲ್ಡ್‌ ಹೇಳಿಕೆಯೊಂದು ಈಗ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಹಿಂದೂ ಸಂಪ್ರದಾಯಗಳ ಬಗ್ಗೆ ಜ್ಯೋತಿಕಾ ಮಾತನಾಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು.

ಹೌದು, ದೇವಸ್ಥಾನಗಳಿಗೆ ಹಣ ಹಾಕುವ ಹಾಗೆ ಶಾಲೆ-ಆಸ್ಪತ್ರೆಗಳಿಗೆ ಹಣ ನೀಡಿ ಎಂದಿದ್ದರು ಅವರು. ಕೆಲವು ತಿಂಗಳುಗಳ ಹಿಂದೆ ಜ್ಯೋತಿಕಾ ತಮಿಳುನಾಡಿನ ತಂಜಾವೂರಿಗೆ ರಾಚಸಿ ಸಿನಿಮಾ (Raatchasi) ಶೂಟಿಂಗ್‌ಗೋಸ್ಕರ ಹೋಗಿದ್ದರಂತೆ. ಆಗ ಅವರು ಅಲ್ಲಿನ ಸುಂದರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅರಮನೆಯಂತಿದ್ದ ಆ ದೇವಸ್ಥಾನದ ವೈಭೋಗ, ಸೌಂದರ್ಯ ನೋಡಿದ ಜ್ಯೋತಿಕಾ ನಿಜಕ್ಕೂ ಮೂಕವಿಸ್ಮಿತರಾಗಿದ್ದರು. ಆದರೆ ಅದೇ ದಿನ ಚಿತ್ರೀಕರಣಕ್ಕೋಸ್ಕರ ಅಲ್ಲಿನ ಆಸ್ಪತ್ರೆಯೊಂದಕ್ಕೆ ಹೋಗಿದ್ದ ಜ್ಯೋತಿಕಾಗೆ ಮಾತ್ರ ನಿಜಕ್ಕೂ ಶಾಕ್ ಕಾದಿತ್ತು. ಆ ಆಸ್ಪತ್ರೆಯ ವ್ಯವಸ್ಥೆ ಸರಿ ಇರಲಿಲ್ಲ, ಸ್ವಚ್ಛತೆಯಂತೂ ಮೊದಲೇ ಇಲ್ಲವಂತೆ. ಹೀಗಾಗಿ ದೇವಸ್ಥಾನಗಳಿಗೆ ದೇಣಿಗೆ ನೀಡುವಂತೆ ಆಸ್ಪತ್ರೆಗಳಿಗೂ ಹಣ ಸಹಾಯ ಮಾಡಿ. ಮನುಷ್ಯರು ಜೀವ ಉಳಿಸಿಕೊಳ್ಳಲು ಆಸ್ಪತ್ರೆಗಳು ತುಂಬ ಸಹಾಯಕ ಎಂದಿದ್ದರು ಜ್ಯೋತಿಕಾ.

ಜ್ಯೋತಿಕಾ ನೀಡಿರುವ ಹೇಳಿಕೆ ನಿಜಕ್ಕೂ ಶಾಕ್ ಉಂಟು ಮಾಡಿದೆ ಎಂದು ಕೆಲವರು ಹೇಳಿದ್ದಾರೆ. ತಮಿಳು ಸಂಪ್ರದಾಯ, ಆಚಾರ-ವಿಚಾರದ ಬಗ್ಗೆ ಅವರಿಗೆ ಏನೂ ತಿಳಿದಿಲ್ಲ, ಮೊದಲು ಅದನ್ನು ಅವರು ಕಲಿಯಲಿ ಎಂದು ಕೆಲ ನೆಟ್ಟಿಗರು ಜ್ಯೋತಿಕಾ ಅವರನ್ನು ಟೀಕಿಸಿದ್ದರು. ಇದೀಗ ಈ ಎಲ್ಲಾ ಟೀಕಾಕಾರರಿಗೆ ಜ್ಯೋತಿಕಾ ಉತ್ತರ ನೀಡಿದ್ದಾರೆ.

ತಂಜಾವೂರು ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರೂ ದೇಣಿಗೆಯ ಜೊತೆಗೆ ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗುವ ವೈದ್ಯಕೀಯ ಕೆಲವು ಉಪಕರಣಗಳನ್ನು ನೀಡಿದ್ದಾರೆ. ಹಾಸಿಗೆ, ಮಕ್ಕಳ ಉದ್ಯಾನವನ ಸೃಷ್ಠಿಸಲು ಹಣದ ರೂಪದಲ್ಲಿ ದೇಣಿಗೆ ನಿಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಆಧುನಿಕ ಯಂತ್ರೋಪಕರಣಗಳನ್ನು ಕೊಳ್ಳುವ ಜೊತೆಗೆ, ಶುಭ್ರತೆಗೆ, ಪೇಯಿಂಟ್‌, ನೆಲಹಾಸು, ಮಕ್ಕಳಿಗೆ ಕಿರುಪಾರ್ಕ್, ಆಧುನಿಕ ಶೌಚಾಲಯಗಳು, ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಹೀಗೆ ಹಲವು ಅಗತ್ಯಗಳಿಗೆ ಈ ಹಣವನ್ನು ಬಳಸುವಂತೆ ಸೂಚಿಸಲಾಗಿದೆ.

ನಟ, ಜ್ಯೋತಿಕ ಪತಿ ಸೂರ್ಯ ಅವರ ಅಗರಂ ಫೌಂಡೇಶನ್‌ನ ಮೂಲಕ ಈ 25 ಲಕ್ಷ ಹಣವನ್ನು ತಮಿಳುನಾಡಿನ ಆರೋಗ್ಯ ಮಂತ್ರಿ ವಿಜಯ್ ಭಾಸ್ಕರ್ ಅವರಿಗೆ ಹಸ್ತಾಂತರಿಸಲಾಗಿದ್ದು. ಆಸ್ಪತ್ರೆಯ ಅಭಿವೃದ್ಧಿಗೆ ಮಾತ್ರವೇ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top