fbpx
ಸಮಾಚಾರ

ನನಸಾಗಿದೆ ಶಂಕರ್​ನಾಗ್ ಕನಸು: ರೈಲು ನಿಲ್ದಾಣದಲ್ಲಿ ಮಾಲ್ಗುಡಿ ಮ್ಯೂಸಿಯಂ

ಲೇಖಕ ಆರ್‌.ಕೆ.ನಾರಾಯಣ್‌ ಅವರ ‘ಮಾಲ್ಗುಡಿ ಡೇಸ್‌’ ಕೃತಿ ಆಧಾರಿತ ಧಾರವಾಹಿಯಲ್ಲಿ ಬಳಕೆಯಾಗಿದ್ದ ಅರಸಾಳು ಹಳೆ ರೈಲ್ವೆ ನಿಲ್ದಾಣವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ನಟ ಶಂಕರ್‌ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳುವಿನ ನವೀಕರಣಗೊಂಡ ರೈಲುನಿಲ್ದಾಣ ಹಾಗೂ ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಶನಿವಾರ ಲೋಕಾರ್ಪಣೆ ಮಾಡಿದರು.

ವರ್ಚುವಲ್ ವಿಡಿಯೋ ಮೂಲಕ ಅರಸಾಳು ರೈಲು ನಿಲ್ದಾಣ, ಪ್ಲಾಟ್​ಫಾರಂ, ಮಾಲ್ಗುಡಿ ಮ್ಯೂಸಿಯಂ ಉದ್ಘಾಟನೆ ಮಾಡಿದ ಕೇಂದ್ರದ ರೈಲ್ವೆ ಸಚಿವ ಸುರೇಶ್ ಅಂಗಡಿ ಈ ಕುರಿತು ಮಾಹಿತಿ ನೀಡಿದರು. ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅದಕ್ಕೆ 245 ಕೋಟಿ ರೂ. ಬೇಕಾಗಲಿದೆ. ಇನ್ನೆರಡು ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮಗೊಳ್ಳುವ ಸಾಧ್ಯತೆಯಿದೆ.

 

 

ಮಾಲ್ಗುಡಿ ಡೇಸ್ ಚಿತ್ರೀಕರಣಗೊಂಡ ಅರಸಾಳು ರೈಲು ನಿಲ್ದಾಣ ಮಾಲ್ಗುಡಿ ನಿಲ್ದಾಣವೆಂದೇ ಪ್ರಸಿದ್ಧವಾಗಿದೆ. ಬ್ರಿಟಿಷರ ಕಾಲದ ಈ ರೈಲು ನಿಲ್ದಾಣವನ್ನು 1.3 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಹಾಗೇ, ಈ ರೈಲು ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಕೂಡ ನಿರ್ಮಿಸಲಾಗಿದೆ. ಇದರಲ್ಲಿ ಶಂಕರ್ ನಾಗ್ ಪ್ರತಿಮೆಯನ್ನು ಕೂಡ ಇರಿಸಲಾಗಿದೆ.

ಕಲಾ ನಿರ್ದೇಶಕ ಜಾನ್ ದೇವರಾಜ್ ನೇತೃತ್ವದಲ್ಲಿ ನಿಲ್ದಾಣದ ಆವರಣದಲ್ಲೇ ‘ಮ್ಯೂಸಿಯಂ ಮಾಲ್ಗುಡಿ’ ಸಿದ್ಧಪಡಿಸಲಾಗಿದೆ. ಮಲೆನಾಡಿನ ಸಂಸ್ಕೃತಿ, ಪರಿಸರ, ಸಮಗ್ರತೆ, ಕೃಷಿ, ಬಳಕೆ ಸಾಮಗ್ರಿಗಳು, ಪ್ರಚೀನ ಕಲಾಕೃತಿಗಳನ್ನು ನೆಲೆಗೊಳಿಸಲಾಗಿದೆ. ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲಾಗಿದೆ. ಮಾಲ್ಗುಡಿಯಲ್ಲಿ ಬರುವ ನಿಲ್ದಾಣದ ಒಂಟಿ ಮರ, ಪ್ಲಾಟ್‌ಫಾರಂ, ಕಲ್ಲು ಬೆಂಚುಗಳು, ನಿಲ್ದಾಣದ ಸಾಲು ಕಂಬಿಗಳಿಗೂ ಜೀವ ತುಂಬಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top