fbpx
ಸಮಾಚಾರ

“ಮುದ್ದಿನ ನಾಯಿ ಬೆಲ್ಟ್ ನಿಂದಲೇ ಸುಶಾಂತ್ ಕೊಲೆ ಮಾಡಲಾಗಿದೆ” ಆಪ್ತ ಸಹಾಯಕ ಸ್ಪೋಟಕ ಹೇಳಿಕೆ

ದೇಶಾದ್ಯಂತ ಕುತೂಹಲ ಕೆರಳಿಸಿದೆ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ. ದಿನದಿಂದ ದಿನಕ್ಕೆ ಈ ಕೇಸ್‌ನಲ್ಲಿ ಹೊಸ ಹೊಸ ತಿರುವುಗಳು ಸಿಗುತ್ತಿವೆ. ಸುಶಾಂತ್ ಸಾವಿಗೆ ಕಾರಣ ಆದವರು ಯಾರು ಎಂಬ ಸತ್ಯವನ್ನು ಬಯಲಿಗೆ ಎಳೆಯುವಲ್ಲಿ ತನಿಖಾಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ. ಈ ಮದ್ಯೆ ಸುಶಾಂತ್ ಬದುಕಿದ್ದಾಗ ನಡೆದ ಘಟನೆಗಳು ಒಂದೊಂದೇ ಆಚೆ ಬರುತ್ತಿವೆ.

ಇದೀಗ ನಟನ ಮಾಜಿ ಆಪ್ತ ಸಹಾಯಕ ಅಂಕಿತ್ ಆಚಾರ್ಯ, ಸುಶಾಂತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ನಲಿಯ ಬೆಲ್ಟ್ ಬಳಸಿ ಸುಶಾಂತ್ ಅವರನ್ನು ಕೊಲೆ ಮಾಡಲಾಗಿದೆ. ಸುಶಾಂತ್ ಕುತ್ತಿಗೆ ಮೇಲೆ ಇರುವ ಗುರುತು ಅವರ ಮುದ್ದಿನ ನಾಯಿ ಫಡ್ಜ್ ನ ಬೆಲ್ಟ್ ನದ್ದು ಎಂದಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅಂಕಿತ್ ಆಚಾರ್ಯ, ನಾನು ಸುಶಾಂತ್ ಸಿಂಗ್ ಅವರ ಜೊತೆ 27*7 ಇರುತ್ತಿದ್ದೆ. ಹೀಗಾಗಿ ಸುಶಾಂತ್ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ಮೃತದೇಹದ ಫೋಟೋಗಳನ್ನು ನಾನು ಹಲವು ಬಾರಿ ನೋಡಿ ಪರಿಶೀಲನೆ ಮಾಡಿದ್ದೇನೆ. ಅವರ ನಾಯಿಯ ಬೆಲ್ಟ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಆತ್ಮಹತ್ಯೆಯಾದಾಗ, ಗುರುತು ಯಾವಾಗಲೂ ‘ಯು’ ಆಕಾರದಲ್ಲಿರುತ್ತದೆ. ಆದರೆ ಯಾರಾದರೂ ಕತ್ತು ಹಿಸುಕಿದಾಗ ಅದು ಯಾವಾಗಲೂ ‘ಓ’ ಆಕಾರದಲ್ಲಿರುತ್ತದೆ. ಸುಶಾಂತ್ ಗಂಟಲಿನ ಮೇಲೂ ‘ಓ’ ಆಕಾರದ ಗುರುತು ಇದೆ. ಆತ್ಮಹತ್ಯೆಯ ಪ್ರಕರಣಗಳಲ್ಲಿ ವ್ಯಕ್ತಿಯ ಕಣ್ಣುಗಳು ದೊಡ್ಡದಾಗಿ ಹೊರಗೆ ಕಾಣುತ್ತಿರುತ್ತದೆ. ನಾಲಿಗೆ ಹೊರಬರುತ್ತದೆ. ಆದರೆ ಸುಶಾಂತ್ ದೇಹದಲ್ಲಿ ಇದು ಯಾವುದೂ ಸಂಭವಿಸಿಲ್ಲ. ಇದು ಖಂಡಿತವಾಗಿಯೂ ಕೊಲೆ ಎಂದು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top