fbpx
ಸಮಾಚಾರ

ಚಿತ್ರದುರ್ಗದ ನಂತರ ಶಿವಮೊಗ್ಗ ಜಿಲ್ಲೆಯ 4 ಸರ್ಕಾರೀ ಶಾಲೆಗಳನ್ನ ದತ್ತು ಪಡೆದ ಕಿಚ್ಚ ಸುದೀಪ್​!

ಕೇವಲ ಚಿತ್ರಗಳ ಮೂಲಕ ಮಾತ್ರವಲ್ಲದೆ ಅನೇಕ ಸಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿರುವವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್… ಕಿಚ್ಚ ಒಬ್ಬ ಒಳ್ಳೆ ನಟ ಮಾತ್ರವಲ್ಲದೆ ಬೇರೆಯವರ ಕಷ್ಟಕ್ಕೆ ಮರುಗುವ ಭಾವುಕ ಜೀವಿ. ಸುತ್ತಮುತ್ತಲಿನ ಜನರ ಬಗ್ಗೆ ಅಪಾರ ಕಾಳಜಿ ಕಳಕಳಿ ಹೊಂದಿರುವ ಸುದೀಪ್ ಚಿತ್ರರಂಗದ ಒಳಗೂ ಹೊರಗೂ ತಮ್ಮ ಕೈನಲ್ಲಾದಷ್ಟು ಸೇವೆಯನ್ನು ಮಾಡಿದ್ದಾರೆ. ಸುದೀಪ್ ಏನೇ ಸಹಾಯ ಮಾಡಿದರೂ ಅಷ್ಟಾಗಿ ಅವು ಹೊರಗೆ ಬರುವುದಿಲ್ಲ, ಒಂದು ರೀತಿ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಯಬಾರದು ಎಂತರಲ್ಲಾ ಹಾಗೆ. ಆದರೆ ಈಗ ಕಿಚ್ಚನ ಸತ್ಕಾರ್ಯವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.. ಏನದು ಅಂತೀರಾ ಮುಂದೆ ಓದಿ

ಇತ್ತೀಚೆಗಷ್ಟೇ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು. ಇದೀಗ ಇನ್ನೂ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.​ ಈ ಮೂಲಕ ಸರ್ಕಾರೀ ಶಾಲೆಗಳ ಜೀರ್ಣೋದ್ದಾರ ಮಾಡಲು ಮುಂದಾಗಿದ್ದಾರೆ.

ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಸುದೀಪ್ ಅವ್ರು ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಟ್ರಸ್ಟ್ ಮೂಲಕ ದತ್ತು ಪಡೆದಿದ್ದಾರೆ. ಆವಿಗೆ ಹಳ್ಳಿ, ಹಾಳಸಸಿ, ಎಸ್​.ಎನ್​ ಬಡಾವಣೆ ಸಾಗರ, ಎಲ್​.ಎಲ್​ ಹಳ್ಳಿ ಸಾಗರ ಸೇರಿ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ.

 

 

ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್​ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ.

ಅಂದಹಾಗೆ ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಕಷ್ಟದಲ್ಲಿರುವ ಅದೆಷ್ಟೊ ಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ಕಷ್ಟ ಅಂತ ಬಂದವರನ್ನು ಕಿಚ್ಚ ಯಾವತ್ತು ಬರಿಗೈಯಲ್ಲಿ ವಾಪಸ್ ಕಳುಹಿಸಿಲ್ಲ. ಸರ್ಕಾರದ ನಿಯಮವನ್ನು ಉಲ್ಲಂಘಿಸದಂತೆ ಸುದೀಪ್ ನೀಡಿದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಜನರಿಗೆ ಅಗತ್ಯ ವಸ್ತುಗಳು, ದಿನಸಿ, ಆಹಾರವನ್ನು ವಿತರಣೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top