fbpx
ಸಮಾಚಾರ

ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಯುಜುವೇಂದ್ರ ಚಾಹಲ್​; ಹುಡುಗಿ ಯಾರು ಗೊತ್ತಾ?

ಮೈದಾನದಲ್ಲಿ ಸ್ಪಿನ್ ಮಾಡುವ ಮೂಲಕ ಮೋಡಿ ಮಾಡುವ ಯುಜುವೇಂದ್ರ ಚಾಹಲ್ ಕೊರೋನಾ ಸಮಯದಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಸರ್​ಪ್ರೈಸ್​​ ನೀಡಿದಂತಾಗಿದೆ. ಹೌದು ಟೀಂ ಇಂಡಿಯಾ ಕ್ರಿಕಟಿಗ ಯಜುವೇಂದ್ರ ಚಾಹಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗೆಳತಿ ಧನ ಶ್ರೀ ವರ್ಮಾ ಅವರೊಂದಿಗೆ ಸಿಂಪಲ್ಲಾಗಿ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದಾರೆ.

ಕೊರಿಯೋಗ್ರಾಫರ್, ಯುಟ್ಯೂಬರ್ ಹಾಗೂ ಡಾಕ್ಟರ್ ಆಗಿರುವ ಧನಶ್ರಿ ವರ್ಮಾ ಅವರಿಗೆ ಚಹಾಲ್ ಮನಸ್ಸು ನೀಡಿದ್ದಾರೆ. ನಾವು ಒಪ್ಪಿದೆವು, ಮನೆಯವರೂ ಒಪ್ಪಿದರು. ಇಂದು ಎಂಗೇಜ್ಮೆಂಟ್ ಸೆರಮನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚಹಾಲ್ ಪೋಸ್ಟ್ ಮಾಡಿದ್ದಾರೆ. ವರ್ಮಾ ಜೊತೆಗಿನ ಎಂಗೇಜ್ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾವಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ಫೋಟೋ ಶೇರ್ ಮಾಡಿರುವ ಚಾಹಲ್, ‘ನಾವು ನಮ್ಮ ಕುಟುಂಬಗಳೊಂದಿಗೆ “ಹೌದು” ಎಂದು ಹೇಳಿದ್ದೇವೆ (ನಮ್ಮ ಕುಟುಂಬದವರ ಜೊತೆಗೆ ನಾವು ಮದುವೆಯಾಗಲು ಒಪ್ಪಿಕೊಂಡಿದ್ದೇವೆ),’ ಎಂದು ಬರೆದಿದ್ದಾರೆ. ಜೊತೆಗೆ ಇದೇ ಚಿತ್ರದಲ್ಲಿ #rokaceremony ಎಂದು ಬರೆಯಲಾಗಿದೆ.

ಚಾಹಲ್ ಶೇರ್ ಮಾಡಿರುವ ಈ ನಿಶ್ಚಿತಾರ್ಥದ (ರೋಕ ಸಮಾರಂಭ) ಫೋಟೋಗೆ ಅನೇಕ ಕ್ರಿಕೆಟಿಗರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top