fbpx
ಸಮಾಚಾರ

“ನಿಮ್ಮನ್ನು ಅಣ್ಣನಾಗಿ ಪಡೆದಿರೋದು ನನ್ನ ಸೌಭಾಗ್ಯ” ದರ್ಶನ್ ಕುರಿತು ಅಂಬಿ ಪುತ್ರ ಅಭಿಷೇಕ್ ಮಾತು

ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ ಎಂದು ದಿವಂಗತ ಹಿರಿಯ ನಟ ಅಂಬರೀಶ್ ಪುತ್ರ ಅಭಿಷೇಕ್ ಹೇಳಿದ್ದಾರೆ.

ನಟ ಅಭಿಷೇಕ್ ಇನ್‍ಸ್ಟಾಗ್ರಾಂನಲ್ಲಿ ದರ್ಶನ್ ಫೋಟೋ ಹಾಕಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಗಸ್ಟ್ 11ಕ್ಕೆ 23 ವರ್ಷ ಆಗಲಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ #23YearsOfBossism’ ಎಂಬ ಹ್ಯಾಷ್‍ಟ್ಯಾಗ್ ಬಳಸಿ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದಲ್ಲಿ ಭಾಗಿಯಾಗಿರುವ ಜೂನಿಯರ್ ರೆಬೆಲ್ ಸ್ಟಾರ್ ಹೊಸ ಪೋಸ್ಟರ್ ರಿವೀಲ್ ಮಾಡಿದ್ದಾರೆ.

‘ನಿಮ್ಮನ್ನು ನನ್ನ ಅಣ್ಣನಾಗಿ ಪಡೆದಿರುವುದು ನನ್ನ ಸೌಭಾಗ್ಯ. ಸೆಲೆಬ್ರೇಟ್‌ ದಿ ಮ್ಯಾನ್, ದಿ ಮಿಥ್, ದಿ ಲೆಜೆಂಡ್- 23ರ ಸಂಭ್ರಮ. ನಿಮ್ಮನ್ನ ಅಣ್ಣ ಎಂದು ಕರೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ. ಇದು ನಿಮ್ಮ ಅಭಿಮಾನಿಗಳ ಕೊಡುಗೆ. ಸೀನಿಯರ್‌ ನಿಮ್ಮಂತೆ ಮತ್ಯಾರು ಇರಲು ಸಾಧ್ಯವಿಲ್ಲ’ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ.

ಅಂದಹಾಗೆ ದರ್ಶನ್​ರನ್ನ ಅಂಬರೀಶ್ ತಮ್ಮ ಮಗನಂತೆಯೇ ಕಾಣುತ್ತಿದ್ದರು. ಇನ್ನು ದರ್ಶನ್​ ಕೂಡ ಅಂಬರೀಶ್ ಪುತ್ರ, ಜೂನಿಯರ್​ ರೆಬೆಲ್​ ಸ್ಟಾರ್​ ಅಭಿಷೇಕ್​ರನ್ನ ತಮ್ಮ ಒಡಹುಟ್ಟಿದ ಸಹೋದರನಂತೆಯೇ ಕಾಣುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top