fbpx
ಸಮಾಚಾರ

ನಟ ಸುದೀಪ್‌ರ ಈ ಕಾರ್ಯವನ್ನು ಹಾಡಿ ಹೊಗಳಿದ ಸಚಿವ ಸುಧಾಕರ್

ಇತ್ತೀಚೆಗಷ್ಟೇ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದ ನಟ ಸುದೀಪ್ ಅವರು ಇದೀಗ ಇನ್ನೂ ನಾಲ್ಕು ಶಾಲೆಗಳನ್ನು ದತ್ತು ಪಡೆಯುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.​ ಈ ಮೂಲಕ ಸರ್ಕಾರೀ ಶಾಲೆಗಳ ಜೀರ್ಣೋದ್ದಾರ ಮಾಡಲು ಮುಂದಾಗಿದ್ದಾರೆ. ಕಿಚ್ಚನ ಈ ಕಾರ್ಯವನ್ನು ಸಚಿವ ಸುಧಾಕರ್ ಅವರು ಹಾಡಿ ಹೊಗಳಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸಚಿವ ಸುಧಾಕರ್ ಅವರು ಕಿಚ್ಚನನ್ನು ಶ್ಲಾಘಿಸಿದರು. “ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಸ್ಕೂಲ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು” ಎಂದು ಸುಧಾಕರ್ ಟ್ವೀಟ್ ಮಾಡುವ ಮೂಲಕ ಸುದೀಪ್ ರನ್ನು ಶ್ಲಾಘಿಸಿದ್ದಾರೆ.

ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಸುದೀಪ್ ಅವ್ರು ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಟ್ರಸ್ಟ್ ಮೂಲಕ ದತ್ತು ಪಡೆದಿದ್ದಾರೆ. ಆವಿಗೆ ಹಳ್ಳಿ, ಹಾಳಸಸಿ, ಎಸ್​.ಎನ್​ ಬಡಾವಣೆ ಸಾಗರ, ಎಲ್​.ಎಲ್​ ಹಳ್ಳಿ ಸಾಗರ ಸೇರಿ ಒಟ್ಟು 4 ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ.

 

 

ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್​ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಾಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದು, ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ.

ಅಂದಹಾಗೆ ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಕಷ್ಟದಲ್ಲಿರುವ ಅದೆಷ್ಟೊ ಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ. ಕಷ್ಟ ಅಂತ ಬಂದವರನ್ನು ಕಿಚ್ಚ ಯಾವತ್ತು ಬರಿಗೈಯಲ್ಲಿ ವಾಪಸ್ ಕಳುಹಿಸಿಲ್ಲ. ಸರ್ಕಾರದ ನಿಯಮವನ್ನು ಉಲ್ಲಂಘಿಸದಂತೆ ಸುದೀಪ್ ನೀಡಿದ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಜನರಿಗೆ ಅಗತ್ಯ ವಸ್ತುಗಳು, ದಿನಸಿ, ಆಹಾರವನ್ನು ವಿತರಣೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top