fbpx
ಸಮಾಚಾರ

ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ‘ಪ್ಯಾಂಟಮ್’ ಚಿತ್ರದ ವಿಕ್ರಾಂತ್​ ರೋಣನ ಫಸ್ಟ್​ಲುಕ್​ ಪೋಸ್ಟರ್

ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​. ಈ ಸಿನಿಮಾದ ಕುರಿತಾಗಿ ಕಳೆದ ಕೆಲವು ದಿನಗಳಿಂದ ಸುದೀಪ್​ ಸಖತ್ ಅಪ್ಡೇಟ್​ ಕೊಡುತ್ತಿದ್ದಾರೆ. ಒಂದರ ಹಿಂದೆ ಒಂದು ವಿಡಿಯೋ, ಚಿತ್ರೀಕರಣ ಆರಂಭವಾದಾಗ ತೆಗೆದ ಫೋಟೋಗಳು. ಹೀಗೆ ಈ ಚಿತ್ರದ ಕುರಿತಾಗಿ ಸಾಕಷ್ಟು ಮಾಹಿತಿ ಅಭಿಮಾನಿಗಳಿಗೆ ನೀಡಲಾಗುತ್ತಿದೆ.

 

 

ಈ ಮದ್ಯೆ ಸೋಮವಾರ ಬೆಳಗ್ಗೆ ಫ್ಯಾಂಟಮ್ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ವಿಕ್ರಾಂತ್ ರೋಣ ಯಾರು ಎಂದು ಬಹಿರಂಗಪಡಿಸಿದ್ದಾರೆ. ಅನೂಪ್ ಭಂಡಾರಿ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಹೇಗಿರಲಿದೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ವಿಭಿನ್ನವಾದ ಸಿಂಹಾಸನದ ಮೇಲೆ ಸ್ಟೈಲ್ ಆಗಿ ಕುಳಿತುಕೊಂಡಿದ್ದು, ಕೈಯಲ್ಲಿ ಗನ್ ಹಿಡಿದಿದ್ದಾರೆ.. ಕಿಚ್ಚನ ಖಡಕ್ ಲುಕ್ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ.

 

 

ವಿಕ್ರಾಂತ್​ ರೋಣ ಫ್ಯಾಂಟಮ್​ ಸಿನಿಮಾದಲ್ಲಿನ ಪ್ರಮುಖ ಪಾತ್ರ. ಈತ ಯಾವಾಗ, ಏತಕ್ಕಾಗಿ, ಏನೆಲ್ಲ ಮಾಡ್ತಾನೆ ಅಂತ ಯಾರಿಗೂ ಅರ್ಥವಾಗುವುದಿಲ್ಲ. ಆದರೆ ಅವರನು ಏನೇ ಮಾಡಿದರೂ, ಅದಕ್ಕೊಂದು ಕಾರಣವಿರುತ್ತದೆಯಂತೆ. ಹೀಗೆಂದು ನಿರ್ದೇಶಕ ಅನೂಪ್​ ಭಂಡಾರಿ ನಾಯಕನ ಪಾತ್ರದ ಪರಿಚಯ ಮಾಡಿ ಕೊಡುವ ಒಂದು ವಿಡಿಯೋ ಹಂಚಿಕೊಂಡಿದ್ದು, ನಂತರ ಪೋಸ್ಟರ್​ ರಿಲೀಸ್​ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top