fbpx
ಸಮಾಚಾರ

ಮೊದಲ ಮಗುವಿಗೆ ಅಪ್ಪನಾದ ‘ರಾಧಾ ರಮಣ’ ಖ್ಯಾತಿಯ ನಟ ಸ್ಕಂದ

‘ರಾಧಾ ರಮಣ’ ಧಾರಾವಾಹಿಯ ಮೂಲಕ ಹ್ಯಾಂಡ್ ಸಮ್ ಲುಕ್ಸ್ ,ಅರ್ಧಂಬರ್ಧ ಕನ್ನಡ ಮಾತಾಡುತ್ತಾ, ಕ್ಯೂಟ್ ಲುಕ್ಸ್ ನಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ರಮಣ ಅಲಿಯಾಸ್ ಸ್ಕಂದ ಅಶೋಕ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನು ಸಿಹಿ ಸುದ್ದಿ ಅಂತೀರಾ? ಮುಂದೆ ಓದಿ

ಹಲವು ವರ್ಷಗಳಿಂದ ಶಿಖಾರನ್ನು ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದುಕೊಂಡು ವೈವಾಹಿಕ ಬದುಕಿಗೆ ಕಾಲಿಟ್ಟ ಸ್ಕಂದ ಈಗ ತಂದೆಯಾಗಿದ್ದಾರೆ. ಈ ವಿಚಾರವನ್ನು ಪತ್ನಿ ಶಿಖಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ರಾಕ್ ಫೋಟೋವನ್ನು ಹಾಕಿ ‘ವಿಶ್ವಕ್ಕೆ ಪುಟ್ಟಲಕ್ಷ್ಮೀಯ ಆಗಮನ’ ಎಂದು ಶಿಖಾ ಕ್ಯಾಪ್ಶನ್ ನೀಡಿ ತಾವು ಹೆಣ್ಣು ಮಗುವಿನ ತಾಯಿಯಾಗಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.

ಈ ಪರಿಸ್ಥಿತಿಯಲ್ಲಿ ತಾಯಿ ಹಾಗೂ ಮಗುವಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸ್ಕಂದ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ. ವೈದ್ಯರ ಜೊತೆ ಸಂಪರ್ಕದಲ್ಲಿದ್ದು, ಯಾವುದೇ ರೋಗ ತಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಕಂದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದಲ್ಲಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಸ್ಕಂದ ಅವರ ಪತ್ನಿ ಶಿಖಾ ಅವರ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ನಟಿ ಶ್ವೇತಾ ಪ್ರಸಾದ್, ಆರ್‌ಜೆ ಪ್ರದೀಪ್ ಮುಂತಾದ ಸ್ಯಾಂಡಲ್‌ವುಡ್ ಕಲಾವಿದರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top