fbpx
ಸಮಾಚಾರ

ಅಯೋಧ್ಯೆ ಶಿಲಾನ್ಯಾಸ ನೇರಪ್ರಸಾರ ವೀಕ್ಷಿಸಿದವರ ಸಂಖ್ಯೆ ಎಷ್ಟು ಕೋಟಿ ಗೊತ್ತಾ? TRPಯಲ್ಲೂ ದಾಖಲೆ ಬರೆದ ಶ್ರೀರಾಮ.

ಇದೇ ತಿಂಗಳು 05ರಂದು ಆಯೋಧ್ಯೆಯಲ್ಲಿ ನಡೆದ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ದೇಶಾದ್ಯಂತ ಸುಮಾರು 160 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಸಾರ್ ಭಾರತಿ ಸಿಇಒ ಶಶಿ ಎಸ್ ವೆಂಪತಿ ಅವರು ಆಗಸ್ಟ್ 5ರಂದು ನಡೆದ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ದೇಶಾದ್ಯಂತ ಸುಮಾರು 16 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಅವರು ಮಾಹಿತಿ ನೀಡಿದ್ದು, ಆಗಸ್ಟ್ 5ರಂದು ಬೆಳಗ್ಗೆ 10.45ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಈ ಕಾರ್ಯಕ್ರಮವನ್ನು ದೇಶದ ಸುಮಾರು 200 ಚಾನೆಲ್ ಗಳು ನೇರ ಪ್ರಸಾರ ಮಾಡಿದ್ದವು. ಈ ಕಾರ್ಯಕ್ರಮವನ್ನು ದೇಶಾದ್ಯಂತ ಸುಮಾರು 16 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top