fbpx
ಸಮಾಚಾರ

ಪ್ಯಾಂಟಮ್ ‘ವಿಕ್ರಾಂತ್ ರೋಣ’ನ ಪೋಸ್ಟರ್ ಕಂಡು ‘ಶಭಾಷ್’ ಎಂದ ದ.ಆಫ್ರಿಕಾದ ಮಾಜಿ ಕ್ರಿಕೆಟಿಗ

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದ್ದು, ನಿರ್ದೇಶಕ ಅನೂಪ್ ಬಂಡಾರಿ ಕಥೆಯ ನಾಯಕ ವಿಕ್ರಾಂತ್ ರೋಣ ಚಿತ್ರದಲ್ಲಿ ಹೇಗಿರುತ್ತಾನೆ ಎಂಬುವುದು ರಿವೀಲ್ ಮಾಡಿದ್ದಾರೆ. ನೆನ್ನೆ ಬೆಳಗ್ಗೆ ರಿಲೀಸ್‌ ಆದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

ಪೋಸ್ಟರ್ ಕಂಡ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ತಲೆ ಬುರುಡೆ ಆಕಾರದಲ್ಲಿ ಇರುವ ಸಿಂಹಾಸನದ ಮೇಲೆ ಕುಳಿತಿರುವ ಸುದೀಪ್‌ ಅವರು ಗನ್‌ ಹಿಡಿದು ಖಡಕ್‌ ಪೋಸ್‌ ನೀಡಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇತರ ಚಿತ್ರರಂಗದ ಪ್ರಮುಖರು ಕೂಡ ಕಿಚ್ಚನ ಪೋಸ್ಟರ್ ಕಂಡು ವಾವ್ ಅಂದಿದ್ದಾರೆ.. ಈ ನಡುವೆ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಹರ್ಷಲ್​ ಗಿಬ್ಸ್ ವಿಕ್ರಾಂತ್ ರೋಣನ ಪೋಸ್ಟರ್ ಗೆ ಮನಸೋತಿದ್ದಾರೆ.

ಹೌದು, ಕಿಚ್ಚ ಸುದೀಪ್​ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ‘ಪ್ಯಾಂಟಮ್’ ಸಿನಿಮಾದ ಪೋಸ್ಟರ್​ ಅನ್ನು ಪೋಸ್ಟ್ ಮಾಡಿದ್ದರು.. ಇದಕ್ಕೆ ಹರ್ಷಲ್​ ಗಿಬ್ಸ್ ಪ್ರತಿಕ್ರಿಯಿಸಿದ್ದು​, “ಮೆಚ್ಚುಗೆ ವ್ಯಕ್ತಪಡಿಸುವ​’ ಇಮೋಜಿಯನ್ನ ಹಾಕಿ ದೊಡ್ಡ ಮನುಷ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅವರು ಈ ಸಿನಿಮಾಗೆ ಕಾಯುತ್ತಿರುವಂತೆ ಪರೋಕ್ಷವಾಗಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top