fbpx
ಸಮಾಚಾರ

ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಮಡಿಲಲ್ಲಿ ಅವಳಿ ಮಕ್ಕಳು

ದಿವಂಗತ ನಟ ಸುಶಾಂತ್‌ ಸಿಂಗ್ ಮೊದಲು ಪ್ರೀತಿಯಲ್ಲಿ ಬಿದ್ದಿದ್ದು ‘ಪವಿತ್ರ ರಿಷ್ತಾ’ ಧಾರಾವಾಹಿ ನಟಿ ಅಂಕಿತಾ ಲೋಖಂಡೆ ಜೊತೆಗೆ. ನಂತರ ಆ ಪ್ರೀತಿ ಬಹುಕಾಲ ಉಳಿಯಲಿಲ್ಲ. ಈ ನಡುವೆ ಸುಶಾಂತ್‌ ನಿಧನರಾದ ಸುದ್ದಿ ಕೇಳಿ ಅಂಕಿತಾ ಸಖತ್‌ ನೊಂದುಕೊಂಡಿದ್ದರು. ಈಗ ಅವರ ಮೊಗದಲ್ಲಿ ನಗು ಮೂಡಲು ಹೊಸ ಕಾರಣ ಸಿಕ್ಕಿದೆ.

ಅಂಕಿತ ಲೋಖಂಡೆ ತುಂಬಾ ಖುಷಿಯಾಗಿರುವ ಫೋಟೋ ಒಂದನ್ನ ತಮ್ಮ ಇನ್​ಸ್ಟಾ ಗ್ರಾಮ್​​ನಲ್ಲಿ ಶೇರ್​ ಮಾಡಿದ್ದಾರೆ. ಮುದ್ದಾದ ಅವಳಿ ಮಕ್ಕಳನ್ನು ಮಡಿಲಲ್ಲಿ ಮಲಗಿಸಿಕೊಂಡು ಅಂಕಿತಾ ನಗು ಬೀರಿದ್ದಾರೆ. ‘ನಮ್ಮ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಆಗಮನ ಆಗಿದೆ. ಇವರಿಂದ ನಮ್ಮ ಖುಷಿ ಹೆಚ್ಚಿದೆ’ ಎಂದು ತಿಳಿಸಿದ್ದಾರೆ. ಅಬೀರ್‌ ಮತ್ತು ಅಬೀರಾ ಎಂಬುದು ಮಕ್ಕಳ ಹೆಸರು ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಆ ಮಕ್ಕಳ ತಂದೆ ತಾಯಿ ಯಾರು ಅನ್ನೋದನ್ನ ರಿವಿಲ್ ಮಾಡಿಲ್ಲ. ಆದರೆ ಆಕೆಯ ಸ್ನೇಹಿತ ವಿಕ್ಕಿ ಜೈನ್, ಅಭಿಷೇಕ್ ಶ್ರೀವತ್ಸ, ವರ್ಷಾ ಜೈನ್ ರೆಶು ಜೈನ್​​ಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ನಮ್ಮ ಕುಟುಂಬವು ಸಂತೋಷದಲ್ಲಿದೆ. ಇಂದಿನಿಂದ ಹೊಸ ಜೀವನ ಪ್ರಾರಂಭವಾಗಿದೆ. ಅವಳಿಗಳ ಜನನದಿಂದ ಎಲ್ಲರೂ ಸಂತೋಷದಲ್ಲಿದ್ದೇವೆ. ಅಬೀರ್ ಮತ್ತು ಅಬೀರಾಗೆ ಸ್ವಾಗತ ಅಂತಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top