fbpx
ಸಮಾಚಾರ

‘ವಿಶ್ವ ಆನೆ ದಿನದಂದು ವಿಶೇಷ ಪ್ರತಿಜ್ಞೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ.

 

 

ಇಂದು ವಿಶ್ವ ಆನೆ ದಿನದ ಪ್ರಯುಕ್ತ ಆನೆಯೊಂದಿಗೆ ಫೋಟೋಗಳನ್ನ ಪೋಸ್ಟ್ ಮಾಡಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ದರ್ಶನ್​, “ಇಂದು ಆಗಸ್ಟ್ 12 ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ” ಎಂದು ಬರೆದುಕೊಂಡಿದ್ದು ಈ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಇಂದು ಆಗಸ್ಟ್ 12, ವಿಶ್ವ ಆನೆ ದಿನ.ಜೀವ ವೈವಿಧ್ಯದಲ್ಲಿ ಆನೆಗೆ ಅದರದ್ದೇ ಆದ ಪ್ರಾಧಾನ್ಯತೆ ಇದೆ.ಅಲ್ಲಲ್ಲಿ ಆನೆಗಳ ಜೀವಕ್ಕೆ ಅಪಾಯವುಂಟಾಗುವಂತೆ ಮನುಷ್ಯ ನಡೆದುಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಸ್ವತಃ ಪ್ರಾಣಿ, ಪಕ್ಷಿ ಪ್ರಿಯರಾಗಿರುವ ನಟ ದರ್ಶನ್ ಈ ಸಂದರ್ಭದಲ್ಲಿ ಆನೆಗಳನ್ನು ಸಂರಕ್ಷಿಸಲು ಕರೆ ಕೊಟ್ಟಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯಾಗಿರುವ ಅವರು, ಆನೆಗಳನ್ನು ಹಲವಾರು ಬೆದರಿಕೆಗಳು, ಅಪಾಯಗಳಿಂದ ರಕ್ಷಿಸೋಣ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top