fbpx
ಸಮಾಚಾರ

ಹೊಸ ಉದ್ಯಮಕ್ಕೆ ಕಾಲಿಟ್ಟ ವಿಜಯಲಕ್ಷ್ಮಿ ದರ್ಶನ್‌: ರೈತರಿಗೆ ನೆರವಾಗಲು ಡಿಜಿಟಲ್‌ ಹಣ್ಣು-ತರಕಾರಿ ಅಂಗಡಿ

ದರ್ಶನ್​ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಇವರು, ಈಗ ಹೊಸ ಉದ್ಯಮ ಆರಂಭಿಸಿದ್ದಾರಂತೆ. ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

ವಿಜಯಲಕ್ಷ್ಮಿ ಹಣ್ಣು-ತರಕಾರಿ ಮಾರುವ ಉದ್ಯಮಕ್ಕೆ ಕೈ ಹಾಕಿದ್ದಾರೆ. ಸದ್ಯದಲ್ಲೇ ಇದಕ್ಕೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಈಗಾಗಲೇ ಅವರ ಹೊಸ ಉದ್ಯಮ ಆರಂಭಿಸೋಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಹೌದು, ಕಮಿಂಗ್​ ಸೂನ್​ ಎನ್ನುತ್ತಲೇ ತಾವು ಆರಂಭಿಸಲಿರುವ ಉದ್ಯಮದ ಕುರಿತು ಒಂದು ಸುಳಿವು ಕೊಟ್ಟಿದ್ದಾರೆ.

ನಗರದ ಸುತ್ತಮುತ್ತಲೂ ರೈತರು ಬೆಳೆದಿರೋ ಗುಣಮಟ್ಟದ ಹಣ್ಣು – ತರಕಾರಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸೋ ಯೋಚನೆ ಮಾಡುತ್ತಿದ್ದಾರಂತೆ ವಿಜಯಲಕ್ಷ್ಮಿ. ರೈತ ಬೆಳ ಹಣ್ಣು ತರಕಾರಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ತರಕಾರಿ ತಲುಪಿಸೋದು ವಿಜಯಲಕ್ಷ್ಮಿ ಕನಸಾಗಿದೆ.. ಆಗಸ್ಟ್‌ 15ರಿಂದ ತರಕಾರಿ ಮತ್ತು ಹಣ್ಣು ಮಾರಾಟ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top