fbpx
ಸಮಾಚಾರ

ಇದು ವಿಶ್ವದ ಅತಿ ದುಬಾರಿ ಮಾಸ್ಕ್: ಅಬ್ಬಬ್ಬಾ! ಈ ಮಾಸ್ಕ್ ನ ಬೆಲೆ ಎಷ್ಟು ಗೊತ್ತಾ?

ಕೋವಿಡ್‌-19 ತಡೆಗಟ್ಟುವ ಸಲುವಾಗಿ ಲಾಕ್‌ಡೌನ್‌ ಸಡಿಲಿಕೆ ಮಧ್ಯೆಯೂ ನಿರ್ಬಂಧಕಾಜ್ಞೆ ಮುಂದುವರಿದಿದೆ. ಮುಂಜಾಗ್ರತಕ್ರಮವಾಗಿ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ರೂಢಿಯಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ರೀತಿಯ ತರೇಹವಾರಿ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ.

 

 

ಐಷಾರಾಮಿಗಳಿಗಾಗಿ ರೇಷ್ಮೆ ಮಾಸ್ಕ್, ಬೆಳ್ಳಿ ಮಾಸ್ಕ್ ಚಿನ್ನದ ಮಾಸ್ಕ್ ಮಾರುಕಟ್ಟೆಗೆ ಬಂದಿದ್ದ ವಿಷಯ ಇತ್ತೀಚಿಗೆ ಸುದ್ದಿಯಾಗಿತ್ತು. ಇದೀಗ ವಜ್ರ ಬಳಸಿ ಸಿದ್ಧಪಡಿಸಿರುವ ಡೈಮಂಡ್ ಮಾಸ್ಕ್ ತಯಾರಿಸಲಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ಮಾಸ್ಕ್ ಎಂದು ಹೇಳಲಾಗುತ್ತಿದೆ.

ಇಸ್ರೇಲ್ ಮೂಲದ ಕಂಪನಿಯೊಂದು ಚಿನ್ನ ಮತ್ತು ವಜ್ರ ಬಳಸಿ ಫೇಸ್ ಮಾಸ್ಕ್ ತಯಾರಿಸುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ನ ಆಭರಣ ತಯಾರಿಕಾ ಕಂಪನಿ, ಕೊರೋನಾವೈರಸ್ ನಿಂದ ಬಚಾವಾಗಲು ವಿಶ್ವದ ಅತ್ಯಂತ ದುಬಾರಿ ಫೇಸ್ ಮಾಸ್ಕ್ ಸಿದ್ಧಪಡಿಸಿರುವುದಾಗಿ ಹೇಳಿದೆ.

ಈ ಮಾಸ್ಕ್ ಬೆಲೆ ಕೇಳಿದ್ರೆ ನೀವೂ ಗಂದಾಗುತ್ತೀರಿ. ಚಿನ್ನ ಹಾಗೂ ವಜ್ರದ ಈ ಮಾಸ್ಕ್ 1.5 ಮಿಲಿಯನ್ ಡಾಲರ್ ಅಂದರೆ 11 ಕೋಟಿ 23 ಲಕ್ಷದ 35 ಸಾವಿರ ರೂಪಾಯಿ.

ಈ ಮಾಸ್ಕ್ ಚಿನ್ನ ಹಾಗೂ ವಜ್ರದಿಂದ ಮಾಡಲಾದ ವಿಶ್ವದ ಅತಿ ದುಬಾರಿ ಮಾಸ್ಕ್ ಆಗಿದೆ. ಈ ಮಾಸ್ಕ್ ಡಿಸೈನ್ ಮಾಡಿದ ಐಸಾಕ್ ಲೆವಿ ಮಾತನಾಡುತ್ತಾ 18 ಕ್‌ಯಾರೆಟ್ ವೈಟ್ ಗೋಲ್ಡ್‌ನ ಈ ಮಾಸ್ಕ್ 3,600 ಬಿಳಿ ಹಾಗೂ ಕಪ್ಪು ವರ್ಣದ ವಜ್ರಗಳಿಂದ ಮಾಡಲಾಗಿದೆ. ಗ್ರಾಹಕ ನೀಡಿದ ಸೂಚನೆಯಂತೆ ಇದರಲ್ಲಿ ಟಾಪ್ ರೇಟೆಡ್ 95 ಫಿಲ್ಟರ್‌ನಿಂದ ಅಲಂಕರಿಸಲಾಗಿದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top