fbpx
ಸಮಾಚಾರ

ಕೆಜಿಎಫ್ ನಟ ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್- ಚಿಕಿತ್ಸೆಗಾಗಿ ಅಮೆರಿಕಕ್ಕೆ ಹಾರಿದ ಅಧೀರ

ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಇದೀಗ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

ಸಿನಿಮಾ ವಿಮರ್ಶಕ ಕೋಮಲ್ ನಹ್ತಾ ಅವರು ‘ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದಾರೆ. ಕ್ಯಾನ್ಸರ್ ಈಗ ಮೂರನೇ ಹಂತಕ್ಕೆ ತಲುಪಿದೆಯಂತೆ. ಇದರ ಬಗ್ಗೆ ಸ್ವತಃ ಸಂಜಯ್ ದತ್ ಮಾಹಿತಿ ನೀಡಬೇಕಿದೆ.

“ಸಂಜಯ್ ದತ್ ಅವರಿಗೆ ಕ್ಯಾನ್ಸರ್ ತುಂಬಾನೇ ಜೋರಾಗಿದೆ. ಪತ್ನಿ ಹಾಗೂ ಪುಟ್ಟ ಮಕ್ಕಳು ದುಬೈನಲ್ಲಿದ್ದು, ಮಕ್ಕಳ ಬಗ್ಗೆ ನಟ ಚಿಂತೆಗೀಡಾಗಿದ್ದಾರೆ. ಸದ್ಯ ಸಂಜಯ್ ಅವರಿಗೆ ತಕ್ಷಣವೇ ಚಿಕಿತ್ಸೆಯ ಅಗತ್ಯತೆ ಇದೆ. ಹೀಗಾಗಿ ಅವರು ಅಮೆರಿಕಕ್ಕೆ ತೆರಳುತ್ತಾರೆ ಎಂದು ಆಪ್ತರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರು.

ಸಂಜಯ್ ದತ್​ ತಮಗೆ ಕ್ಯಾನ್ಸರ್​ ಇರುವ ವಿಚಾರವನ್ನು ನೇರವಾಗಿ ಹೇಳಿಕೊಂಡಿಲ್ಲ.. ಬದಲಾಗಿ ಟ್ವೀಟ್ ಮಾಡಿ ‘ಹಾಯ್ ಸ್ನೇಹಿತರೇ, ನಾನು ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗಿದ್ದಾರೆ ಮತ್ತು ನನ್ನ ಹಿತೈಷಿಗಳು ಚಿಂತಿಸಬೇಡಿ ಅಥವಾ ಅನಗತ್ಯವಾಗಿ ಊಹಿಸಿಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top