fbpx
ಸಮಾಚಾರ

ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ ಅಧೀರ: ಕೆಜಿಎಫ್-2 ಶೂಟಿಂಗ್ ಕತೆಯೇನು? ಮತ್ತೆ ಮುಂದಕ್ಕೆ ಹೋಗುತ್ತಾ?

ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಇದೀಗ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

ಸಿನಿಮಾ ವಿಮರ್ಶಕ ಕೋಮಲ್ ನಹ್ತಾ ಅವರು ‘ಸಂಜಯ್ ದತ್ ಅವರು ಲಂಗ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರು ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದಾರೆ. ಕ್ಯಾನ್ಸರ್ ಈಗ ಮೂರನೇ ಹಂತಕ್ಕೆ ತಲುಪಿದೆಯಂತೆ.

ಸಂಜಯ್ ದತ್ ಟ್ವೀಟ್ ಮಾಡಿ ‘ಹಾಯ್ ಸ್ನೇಹಿತರೇ, ನಾನು ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗಿದ್ದಾರೆ ಮತ್ತು ನನ್ನ ಹಿತೈಷಿಗಳು ಚಿಂತಿಸಬೇಡಿ ಅಥವಾ ಅನಗತ್ಯವಾಗಿ ಊಹಿಸಿಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಜಯ್ ದತ್ ಈಗಾಗಲೇ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ, ಬಾಕಿ ಇರುವ ಕೆಜಿಎಫ್-2 ಚಿತ್ರದ ಶೂಟಿಂಗ್ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ, ಚಿಕಿತ್ಸೆಗಾಗಿ ಅವರು ಶೀಘ್ರವೇ ಅಮೆರಿಕ್ಕೆ ತೆರಳುತ್ತಿದ್ದಾರೆ. ಹಾಗಾದರೆ, ಕೆಜಿಎಫ್ ಚಾಪ್ಟರ್-2 ಕಥೆ ಏನು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಹೀಗಾಗಿ, ಮುಂದೇನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಸಂಜಯ್ ದತ್ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದರೆ ತುಂಬಾ ಸಮಯ ಅಲ್ಲಿಯೇ ಇರಬೇಕಾಗುತ್ತದೆ. ಭಾರತಕ್ಕೆ ವಾಪಾಸದ ನಂತರವೂ ಅವರು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಬಾಕಿ ಇರುವ ಚಿತ್ರದ ಶೂಟಿಂಗ್ ಕತೆ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top