fbpx
ಸಮಾಚಾರ

ಪಶು ಸಂಗೋಪನೆ ಸಹಾಯಕ ಮತ್ತು ಪರೀಕ್ಷಕರ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಹಾಕಲು ನಾಳೆ ಕೊನೆ ದಿನಾಂಕ

ಕರ್ನಾಟಕ ರಾಜ್ಯ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದ್ದು ಅರ್ಜಿಯನ್ನು ಸಲ್ಲಿಸಲು 14-08-2020 ಕೊನೆಯ ದಿನಾಂಕವಾಗಿದೆ.

ಒಟ್ಟು ಹುದ್ದೆಗಳು: 115

ವಯೋಮಿತಿ:
ಕನಿಷ್ಠ: 18 ವರ್ಷ
ಗರಿಷ್ಠ : 35 ವರ್ಷ.

ವಯೋಮಿತಿ ವಿನಾಯಿತಿ:
ಎಸ್ ಸಿ/ ಎಸ್ಟಿ/ ಕೆಟಗೆರಿ -1 ಅಭ್ಯರ್ಥಿ: 5 ವರ್ಷ
ಕೆಟಗೆರಿ 2ಎ, 2ಬಿ ಹಾಗೂ 3ಬಿ ಅಭ್ಯರ್ಥಿ: 3 ವರ್ಷ

ಶೈಕ್ಷಣಿಕ ವಿದ್ಯಾರ್ಹತೆ:
ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ಬಿ.ಎಸ್ಸಿ ಪದವಿಯಲ್ಲಿ ಪ್ರಾಣಿಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಹೊಂದಿರುವ ಪದವಿಯನ್ನು ಹೊಂದಿರಬೇಕು.

ಸಹಾಯಕರ ಹುದ್ದೆಗಳಿಗೆ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಥವಾ ಯಾವುದೇ ಇತರ ವಿಶ್ವ ವಿದ್ಯಾಲಯವು ನಡೆಸಲಾದ ಪಶು ಆರೋಗ್ಯ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಕೆಟಗೆರಿ -1/ ಮಾಜಿ ಯೋಧ: 270 ರು
ಸಾಮಾನ್ಯ, 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿ: 520 ರು

ನೇಮಕಾತಿ ಪ್ರಕ್ರಿಯೆ: ಮೆರಿಟ್ ಆಭ್ಯರ್ಥಿ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top