fbpx
ಸಮಾಚಾರ

ಬಿಗ್ ಬ್ರೇಕಿಂಗ್: ಕೊರೋನಾ ಭೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಮಹಾಮಾರಿ ಭಾರತದಲ್ಲೂ ದಿನದಿನಕ್ಕೆ ಹೆಚ್ಚುತ್ತಿದ್ದು ನಾಗರೀಕರ ಬದುಕಿನ ಮೇಲೆ ರುದ್ರ ನರ್ತನ ಮೆರೆಯುತ್ತಿದೆ.. ಕೇಂದ್ರ ಮಂತ್ರಿಗಳು ಸೇರಿದಂತೆ ಕೆಲ ರಾಜ್ಯಗಳ ಮಂತ್ರಿಗಳು, ಮುಖ್ಯಮಂತ್ರಿಗಳನ್ನೂ ಕೂಡ ಕಾದಿದ್ದ ಕೊರೋನಾ ವೈರಸ್ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಗೂ ಭೀತಿಯನ್ನು ಹುಟ್ಟುಹಾಕಿದೆ.

ಹೌದು, ಪ್ರಧಾನಿ ಮೋದಿಗೆ ಕೊರೋನಾ ಭೀತಿ ಎದುರಾಗಿದೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಕಳೆದ ಆಗಸ್ಟ್.05ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಸಂದರ್ಭದಲ್ಲಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲದಾಸ್ ಮಹತ್ವದ ಪಾತ್ರ ವಹಿಸಿದ್ದರು. 100ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಪೂಜೆಗಳ ಮುಂದಾಳತ್ವ ವಹಿಸಿಕೊಂಡಿದ್ದರು.

 

 

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಐವರು ಪ್ರಮುಖ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಐವರಲ್ಲಿ ಮಹಂತ್ ನೃತ್ಯ ಗೋಪಾಲ್ ದಾಸ್ ಕೂಡ ಒಬ್ಬರಾಗಿದ್ದರು. ಶಿಲಾನ್ಯಾಸ ವೇಳೆ ಗೋಪಾಲ್ ದಾಸ್ ಜೊತೆಯಲ್ಲಿಯೇ ಪ್ರಧಾನಿ ಮೋದಿ ಕೂಡ ಸಾಕಷ್ಟು ಹೊತ್ತು ವೇದಿಕೆ ಹಂಚಿಕೊಂಡಿದ್ದರು.. ಹಾಗಾಗಿ ಮೋದಿಗೂ ಕೊರೋನಾ ಭೀತಿ ಎದುರಾಗಿದೆ.

ಪ್ರಧಾನಿ ಮೋದಿಯನ್ನು ಬಿಟ್ಟರೆ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್,ರವರು ಭಾಗಿಯಾಗಿದ್ದರು. ಇದೀಗ ಮಹಂತ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಎಲ್ಲರಿಗೂ ಆತಂಕ ಹೆಚ್ಚಾಗುವಂತೆ ಮಾಡಿದೆ.

ಅಂದಹಾಗೆ ಕಾರ್ಯಕ್ರಮದಕ್ಕೂ ಕೆಲ ದಿನಗಳ ಮೊದಲು ಅರ್ಚಕ ಪ್ರದೀಪ್ ದಾಸ್ ಸೇರಿ ಕರ್ತವ್ಯದಲ್ಲಿದ್ದ 14 ಮಂದಿಗೆ ಕೊರೋನ ವೈರಸ್ ದೃಢಪಟ್ಟಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top