ವಿಶೇಷ ಡ್ರೋನ್ ತಯಾರಿಸಿದ್ದಾಗಿ ಸುಳ್ಳು ಹೇಳಿಕೊಂಡು ಓಡಾಡಿದ್ದ ಪ್ರತಾಪ್ ಈಗ ಎಲ್ಲರ ಮುಂದೆ ಬೆತ್ತಲಾಗಿದ್ದಾನೆ. ಪ್ರತಾಪನ ‘ಸಾಹಸ’ ಕಂಡು ಯಾರೆಲ್ಲಾ ಈತನನ್ನು ಹೊಗಳಿ ಹಟ್ಟಕ್ಕೇರಿಸಿದ್ದರೋ ಅವರೇ ಇದೀಗ ಛೀಮಾರಿ ಹಾಕುವಂಥ ಪರಿಸ್ಥಿತಿ ಎದುರಿಸುತ್ತಿದ್ದಾನೆ.
ಯಾವುದೇ ಡ್ರೋನ್ ತಯಾರು ಮಾಡದೇ ಇದ್ದರೂ ಜಾಗತಿಕ ಮಟ್ಟದ ವಿಜ್ಞಾನಿ ತಾನು ಎಂದು ಪ್ರತಾಪ್ ವಂಚಿಸಿರುವ ದೂರುಗಳಿವೆ. ಸಂಘ-ಸಂಸ್ಥೆಗಳು ಹಾಗೂ ಸರ್ಕಾರವನ್ನು ವಂಚಿಸಿದ್ದ ಹಾಗೆಯೆ ಕೆಲವು ಮಾಧ್ಯಮಗಳನ್ನು ಕೂಡ ಪ್ರತಾಪ್ ವಂಚಿಸಿದ್ದ. ತಾನು ಮಾಡದೇ ಇರುವ ಸಾಧನೆಯ ಕಟ್ಟು ಕಥೆಯನ್ನು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ.
ಕೊನೆಗೆ ವೆಬ್ಸೈಟ್ವೊಂದು ಡ್ರೋನ್ ಪ್ರತಾಪ್ ಕುರಿತು ತನಿಖಾ ವರದಿ ಪ್ರಕಟಿಸಿತ್ತು. ಅದಾದ ಮೇಲೆ ಪ್ರತಾಪ್ ಡ್ರೋನ್ ತಯಾರಿಕೆಯ ಪ್ರಾಥಮಿಕ ಜ್ಞಾನವನ್ನೂ ಹೊಂದಿಲ್ಲ ಎಂಬುದು ಬಹಿರಂಗವಾಗಿತ್ತು. ಈ ವರೆಗೂ ಪ್ರತಾಪ್ ತಯಾರಿಸಿದ ಡ್ರೋನ್ ಪ್ರಾತ್ಯಕ್ಷಿಕೆ ಕೊಡುವಲ್ಲಿ ವಿಫಲನಾಗಿದ್ದಾನೆ.
ರಾಹುಲ್ ಗಾಂಧಿಯವರಿಂದ ಹಿಡಿದು ಜಗ್ಗೇಶ್ ವರೆಗೂ ಎಲ್ಲರಿಂದಲೂ ಬಿಟ್ಟಿ ಪಬ್ಲಿಸಿಟಿ ಪಡೆದಿದ್ದ ಪ್ರತಾಪ ಅವರು ಪವಾಡ ತಜ್ಞ ಹುಲಿಕಲ್ ನಟರಾಜ್ ಅವರನ್ನು ಕೂಡ ಬಕ್ರ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ. ಸ್ವತಃ ಹುಲಿಕಲ್ ನಟರಾಜ್ ಅವರೇ ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಂಡಿದ್ದಾರೆ. “ನಾವ್ಯಾರು ಆತನನ್ನು ಪ್ರಶ್ನಿಸಲಿಲ್ಲ, ಆತನನ್ನು ಯುವವಿಜ್ಞಾನಿ ಅಂತೆಲ್ಲಾ ವೈಭವೀಕರಿಸಿದೇವು ಆತ ನನಗೂ ಚಳ್ಳೆ ಹಣ್ಣು ತಿನ್ನಿಸಿದ್ದ” ಎಂದು ಹೇಳಿದ್ದಾರೆ.
ಪ್ರತಾಪ್ ಬಗ್ಗೆ ಮಾತನಾಡಿರುವ ಹುಲಿಕಲ್ ನಟರಾಜ್ ಅವರ ವಿಡಿಯೋ ಅನ್ನು ಇಲ್ಲಿ ನೋಡಿ👇👇👇
“ಪ್ರತಾಪ್ ಕುರಿತಾಗಿ ನಟರಾಜ್ ಅವರು ಹಲವಾರು ವಿಷಯಗಳನ್ನು ಹೇಳಿದ್ದಾರೆ. ನಮ್ಮ ಕಾರ್ಯಕ್ರಮವೊಂದಕ್ಕೆ ಆತನನ್ನು ಅತಿಥಿಯಾಗಿ ಕರೆಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡಿಸಿದ್ದೆ. ನಾನು ಕೂಡ ಆತನನ್ನು ಪ್ರಶ್ನಿಸಲೇ ಇಲ್ಲ. ನಾನೂ ಕೂಡ ಅವನ ಮಾತಿನ ಮೋಡಿಗೆ ಬಕ್ರ ಆಗಿದ್ದೆ. ಪ್ರಶ್ನಿಸದೆ ನಾವು ಯಾವ ವಿಚಾರವನ್ನು ಒಪ್ಪಿಕೊಳ್ಳಬಾರದು ಎಂದು ಪ್ರತಾಪ್ ನಿಂದ ಸಾಭೀತು ಪಡಿಸಿದ್ದಾನೆ” ಎಂಬ ಹಲವಾರು ಸಂಗತಿಗಳನ್ನು ಹುಲಿಕಲ್ ನಟರಾಜ್ ಅವರು ಹೇಳಿದ್ದಾರೆ!
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
