fbpx
ಸಮಾಚಾರ

ಕೆಜಿಎಫ್ 2 ಚಿತ್ರತಂಡಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡ ಸಂಜಯ್ ದತ್

ನಟ ಸಂಜಯ್ ದತ್ ಅವರು ಇದೀಗ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ. ಕ್ಯಾನ್ಸರ್ ಈಗ ಮೂರನೇ ಹಂತಕ್ಕೆ ತಲುಪಿದೆಯಂತೆ.

ಸಂಜಯ್ ದತ್ ಟ್ವೀಟ್ ಮಾಡಿ ‘ಹಾಯ್ ಸ್ನೇಹಿತರೇ, ನಾನು ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇನೆ.ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗಿದ್ದಾರೆ ಮತ್ತು ನನ್ನ ಹಿತೈಷಿಗಳು ಚಿಂತಿಸಬೇಡಿ ಅಥವಾ ಅನಗತ್ಯವಾಗಿ ಊಹಿಸಿಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಜಯ್ ದತ್ ಈಗಾಗಲೇ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಹೀಗಾಗಿ, ಬಾಕಿ ಇರುವ ಕೆಜಿಎಫ್-2 ಚಿತ್ರದ ಶೂಟಿಂಗ್ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೆ, ಚಿಕಿತ್ಸೆಗಾಗಿ ಅವರು ಶೀಘ್ರವೇ ಅಮೆರಿಕ್ಕೆ ತೆರಳುತ್ತಿದ್ದಾರೆ. ಹಾಗಾದರೆ, ಕೆಜಿಎಫ್ ಚಾಪ್ಟರ್-2 ಕಥೆ ಏನು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಹೀಗಾಗಿ, ಮುಂದೇನು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಸಂಜಯ್ ದತ್ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದರೆ ತುಂಬಾ ಸಮಯ ಅಲ್ಲಿಯೇ ಇರಬೇಕಾಗುತ್ತದೆ. ಭಾರತಕ್ಕೆ ವಾಪಾಸದ ನಂತರವೂ ಅವರು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಬಾಕಿ ಇರುವ ಚಿತ್ರದ ಶೂಟಿಂಗ್ ಕತೆ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಚಿತ್ರತಂಡವೇ ಉತ್ತರ ನೀಡಿದೆ.

ಚಿತ್ರಕ್ಕೆ ಯಾವುದೇ ತೊಂದರೆ ಇಲ್ಲ:
ಹೌದು, ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ‘ಕೆಜಿಎಫ್​ – 2’ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ತಿಳಿಸಿದ್ದಾರೆ. ‘ಯಾವ ಸಮಸ್ಯೆಯೂ ಇಲ್ಲ. ಸಂಜಯ್​ ದತ್​ ಅವರದ್ದು ಇದ್ದಿದ್ದು ಕೇವಲ ಎರಡು ದಿನಗಳ ಶೂಟಿಂಗ್​ ಮಾತ್ರ. ಅದೂ ಸಹ ಎಕ್ಸ್​ಟೆನ್ಶನ್​ ದೃಶ್ಯಗಳು. ಆ ದೃಶ್ಯಗಳಿಲ್ಲದಿದ್ದರೂ ಪರವಾಗಿಲ್ಲ. ಮಿಕ್ಕಂತೆ ಅವರ ಭಾಗದ ಚಿತ್ರೀಕರಣವೆಲ್ಲಾ ಮುಗಿದಿದೆ’ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.

ಇನ್ನು ಚಿತ್ರದ ಚಿತ್ರೀಕರಣವು ಇದೇ ಆಗಸ್ಟ್​ 16ರಿಂದ ಪ್ರಾರಂಭವಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಆಗಸ್ಟ್​ 18ರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತಾರೆ ಕಾರ್ತಿಕ್​. ‘ಚಿತ್ರದ ಸೆಟ್​ಗಳ ಕೆಲಸ ಸ್ವಲ್ಪ ಬಾಕಿ ಇತ್ತು. ಮಳೆ ಬಂದಿದ್ದರಿಂದ ಕೆಲಸ ನಿಧಾನವಾಯಿತು. ಆದಷ್ಟು ಬೇಗ ಮುಗಿಸಿ, ಆಗಸ್ಟ್​ 18ರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ ಕಾರ್ತಿಕ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top