fbpx
ಸಮಾಚಾರ

‘ಪ್ಯಾಂಟಮ್’ ಜಗತ್ತಿಗೆ ‘ಫಕೀರ’ನಾಗಿ ಎಂಟ್ರಿಕೊಟ್ಟ ‘ನಿರೂಪ್’: ಇಲ್ಲಿದೆ ‘ಸಂಜೀವ್ ಗಾಂಭೀರ’ ಅಲಿಯಾಸ್ ‘ಸಂಜು; ಫಸ್ಟ್​ಲುಕ್

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದ್ದು, ಮೊನ್ನೆಯಷ್ಟೇ ನಿರ್ದೇಶಕ ಅನೂಪ್ ಬಂಡಾರಿ ಕಥೆಯ ನಾಯಕ ವಿಕ್ರಾಂತ್ ರೋಣ ಚಿತ್ರದಲ್ಲಿ ಹೇಗಿರುತ್ತಾನೆ ಎಂಬುವುದು ರಿವೀಲ್ ಮಾಡಿದ್ದರು. ನಿರೀಕ್ಷೆಯಂತೆ ವಿಕ್ರಾಂತ್ ರೋಣನ ಮೊದಲ ನೋಟ ಸಿನಿಪ್ರಿಯರ ಮನಗೆದ್ದಿತ್ತು..

 

 

ಅದಾಗಲೇ ನಿರ್ದೇಶಕ ಅನೂಪ್ ಭಂಡಾರಿ ಅವರು ಚಿತ್ರದ ಮತ್ತೊಂದು ಪಾತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಿದ್ದಾರೆ. ಇಂದು ಅನೂಪ್ ಅವರ ಸಹೋದರ ನಟ ನಿರೂಪ ಭಂಡಾರಿ ಅವರ ಹುಟ್ಟು ಹಬ್ಬ ಈ ಹಿನ್ನಲೆಯಲ್ಲಿ ಚಿತ್ರತಂಡ ಈಗ ನಿರೂಪ್​ ಭಂಡಾರಿ ಅವರ ಹುಟ್ಟುಹಬ್ಬಕ್ಕಾಗಿ ಒಂದು ಸರ್ಪ್ರೈಸ್​ ಉಡುಗೊರೆ ನೀಡಿದೆ.

 

 

ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಿರೂಪ್ ಭಂಡಾರಿ ಅವರ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಫ್ಯಾಂಟಮ್​ ಸಿನಿಮಾದಲ್ಲಿ ನಿರೂಪ್​ ಭಂಡಾರಿ ‘ಸಂಜೀವ್​ ಗಾಂಭೀರ’ ಅಲಿಯಾಸ್​ ‘ಸಂಜು’ ಉರ್ಫ್ ‘ಫಕೀರ’ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

 

 

ಲಂಡನ್​ನಿಂದ ಹುಟ್ಟೂರಿಗೆ ಬರುವ ಸಂಜು, ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇರುವ ಜಾಲಿ ಬಾಯ್​ ಪಾತ್ರ. ಈತನನ್ನು ಸಿನಿಮಾದಲ್ಲಿ ಪರಿಚಯಿಸುವ ಹಾಡು ಫಕೀರ ಇರಬಹುದು ಎನ್ನಲಾಗುತ್ತಿದೆ. ಅನೂಪ್​ ಹಂಚಿಕೊಂಡಿರುವ ವಿಡಿಯೋದಲ್ಲಿ ಅದರ ಒಂದು ಝಲಕ್​ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top