fbpx
ಸಮಾಚಾರ

ಪ್ರಾಢಶಾಲಾ‌ ವಿದ್ಯಾರ್ಥಿಗಳಿಗೆ ಚಂದನ ಟಿವಿಯಲ್ಲಿ ಇ-ತರಗತಿ‌: ಇಲ್ಲಿದೆ ವೇಳಾಪಟ್ಟಿ

ಕೋವಿಡ್ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲು, ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ದೂರದರ್ಶನದ ಚಂದನ ವಾಹಿನಿಯಲ್ಲಿ ಈಗಾಗಲೇ ಸೇತುಬಂಧ ತರಗತಿಗಳು ನಡೆಯುತ್ತಿವೆ.

ಇದೀಗ ಇದರ ಮುಂದುವರೆದ ಸರಣಿಯ ಭಾಗವಾಗಿ ಇದೇ 17ರಿಂದ ಸೆಪ್ಟೆಂಬರ್‌ 11ರವರೆಗೆ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರವಾಗಲಿದೆ. 8ರಿಂದ 10ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ ಈ ಕ್ಲಾಸ್‌ ನಡೆಯಲಿದ್ದು, ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಆಗಲಿದೆ ಎಂದು ಡಿಎಸ್ಇಆರ್‌ಟಿ ಮಾಹಿತಿ ನೀಡಿದೆ.

ತರಗತಿಗಳ ವೇಳಾಪಟ್ಟಿ ಹೀಗಿದೆ:

ಕನ್ನಡ, ಇಂಗ್ಲಿಷ್‌ (ಪ್ರಥಮ ಹಾಗೂ ದ್ವಿತೀಯ ಭಾಷೆ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಥಮ ಭಾಷೆ ಸಂಸ್ಕೃತ, ಹಿಂದಿ (ತೃತೀಯ) ಮತ್ತು ಪ್ರಥಮ ಭಾಷೆ ಉರ್ದು ವಿಷಯಗಳಲ್ಲಿ ಸಿದ್ಧಪಡಿಸಿರುವ ಪಾಠಗಳನ್ನು ಪ್ರತಿ ದಿನ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ, 11.30ರಿಂದ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ 4.30ರವರೆಗೆ ಹಾಗೂ 5 ರಿಂದ 5.30ರವರೆಗೆ ನಿಗದಿತ ವೇಳಾಪಟ್ಟಿಯಂತೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top