fbpx
ಸಮಾಚಾರ

ಕನ್ನಡ ಚಿತ್ರರಂಗದ ನಟಿಗೆ ವಕ್ಕರಿಸಿದ ಕೊರೋನಾ ವೈರಸ್

ಕೊರೋನಾ ಅಟ್ಟಹಾಸ ಜಗತ್ತಿನ ಎಲ್ಲೆಡೆ ರುದ್ರನರ್ತನ ಮಾಡುತ್ತಿದೆ. ದಿನ ಕಳೆದಂತೆ ಒಬ್ಬರಿಂದ ಒಬ್ಬರಿಗೆ ಈ ಸೋಂಕು ಹರಡುತ್ತಲೇ ಇದೆ. ಸಿನಿರಂಗದ ಸೆಲೆಬ್ರಿಟಿಗಳೂ ಈ ಸೋಂಕಿನಿಂದಾಗಿ ಆಸ್ಪತ್ರೆ ಪಾಲಾಗಿದ್ದಾರೆ. ಈಗ ಟಾಲಿವುಡ್​ ನಟಿ ನಿಕ್ಕಿ ಗಲ್ರಾನಿ ಅವರಿಗೂ ಸೋಂಕು ತಗುಲಿದೆ.

ನಟಿ ನಿಕ್ಕಿ ಗಲ್ರಾನಿ ತಮಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಕಳೆದ ವಾರ ನನಗೆ ಕೊರೋನಾ ಪಾಸಿಟಿವ್ ಇತ್ತು ಎಂದು ನಟಿ ಆಗಸ್ಟ್‌ 13ರಂದು ಗುರುವಾರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ನಟಿ, ’ಕಳೆದ ಒಂದು ವಾರದ ಹಿಂದೆಯೇ ನನಗೆ ಕರೊನಾ ಸೋಂಕು ತಗುಲಿದೆ. ಆರೋಗ್ಯದಲ್ಲಿ ಮೊದಲಿಗಿಂತ ಚೇತರಿಕೆ ಕಂಡುಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಜ್ವರ, ಶೀತ, ಗಂಟಲು ನೋವು ಸೇರಿ ಕರೊನಾ ಲಕ್ಷಣಗಳು ಕಂಡು ಬಂದಿದ್ದರ ಹಿನ್ನೆಲೆಯಲ್ಲಿ ಚಿಕಿತ್ಸೆ ಗೆ ಒಳಪಟ್ಟಿದ್ದೆ. ಇದೀಗ ಬಹುತೇಕ ಗುಣಮುಖಳಾಗಿದ್ದೇನೆ. ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಆಗಿದ್ದೇನೆ.” ಎಂದು ನಿಕ್ಕಿ ತಿಳಿಸಿದ್ದಾರೆ,.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top