fbpx
ಸಮಾಚಾರ

ಕೈತಪ್ಪಿದ ಐಪಿಎಲ್ ನಲ್ಲಿ ಆಡುವ ಅವಕಾಶ: ಜೂನಿಯರ್ ‘ಸ್ಟೈನ್’ ಖ್ಯಾತಿಯ ಉದಯೋನ್ಮುಖ ಕ್ರಿಕೆಟಿಗ ಆತ್ಮಹತ್ಯೆ!

ದಕ್ಷಿಣ ಆಫ್ರಿಕಾದ ಸ್ಟಾರ್ ವೇಗಿ ಡೇಲ್ ಸ್ಟೈನ್ ಅವರನ್ನೇ ಹೋಲುವ ಬೌಲಿಂಗ್ ಶೈಲಿ ಹೊಂದಿದ್ದ ಕಾರಣದಿಂದಾಗಿ ‘ಜೂನಿಯರ್ ಸ್ಟೈನ್’ ಎಂದೇ ಸ್ಥಳೀಯ ಕ್ರಿಕೆಟ್‌ನಲ್ಲಿ ಕರೆಸಿಕೊಳ್ಳುತ್ತಿದ್ದ ಮುಂಬೈನ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಪಿಎಲ್ ತಂಡಗಳನ್ನು ಪ್ರತಿನಿಧಿಸುವ ಅವಕಾಶ ಕೈತಪ್ಪಿದ್ದೇ ಅವರ ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಅವರ ನಿವಾಸದಲ್ಲಿ ಕುತ್ತಿಗೆಗೆ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಶವ ಪತ್ತೆಯಾಗಿದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 13ನೇ ಆವೃತ್ತಿಯಲ್ಲಿ ಆಡುವ ಅವಕಾಶ ಸಿಗದೇ ಇರುವ ಕಾರಣಕ್ಕೆ ಕರಣ್‌ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತನ ಆಪ್ತ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.

ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರಣ್ ತನ್ನ ಆಪ್ತ ಗೆಳೆಯನಿಗೆ ತಿಳಿಸಿದ್ದ. ಆತ ಮನೆಯವರಿಗೆ ಮಾಹಿತಿ ನೀಡಿದ್ದರೂ ಅದಾಗಲೇ ನೇಣಿಗೆ ಕೊರಳೊಡ್ಡಿದ್ದ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಕರಣ್ ಕೊನೆಯುಸಿರೆಳಿದಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ನಿಯಮದ ಪ್ರಕಾರ, ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರಿಕೆಟಿಗರು ಮಾತ್ರ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಹೀಗಾಗಿ ಕ್ಲಬ್ ಕ್ರಿಕೆಟಿಗ ಕರಣ್ ತಿವಾರಿ ಅವಕಾಶ ವಂಚಿತರಾಗಿದ್ದರು. ಕಳೆದ ವರ್ಷ ಅವರು ಐಪಿಎಲ್ ಟೂರ್ನಿಯ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವು ತಂಡಗಳಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರೂ, ರಾಜ್ಯಮಟ್ಟದ ಕ್ರಿಕೆಟಿಗ ಎನಿಸಿಕೊಳ್ಳದ ಕಾರಣದಿಂದಾಗಿ ಅವರಿಗೆ ಐಪಿಎಲ್ ಅವಕಾಶ ಒಲಿದಿರಲಿಲ್ಲ.

ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದ ಕರಣ್ ಈ ಕೃತ್ಯ ಎಸಗಿದ್ದಾರೆ. ಕ್ರಿಕೆಟಿಗನ ಸ್ನೇಹಿತ ಆ ವಿಚಾರವನ್ನು ಅವರ ಸೋದರಿಗೆ ಹೇಳಿದ್ದಾರೆ. ಆಗ ಆಕೆ ಅವರ ತಾಯಿಗೆ ವಿಷಯ ತಿಳಿಸಿದ್ದರು. ಆದರೆ ಅಷ್ಟರಲ್ಲೇ ಎಲ್ಲ ಮುಗಿದಿತ್ತು, ಆಸ್ಪತ್ರೆಗೆ ತಲುಪುವ ಮೊದಲು ಕರಣ್ ಸಾವನ್ನಪ್ಪಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top