fbpx
ಸಮಾಚಾರ

ನಮ್ಮ RCBಗೆ ಜೈ ಎನ್ನಲಿದ್ದಾರೆ ಕಿಚ್ಚ ಸುದೀಪ್..?

ಈ ವರ್ಷದ IPLಗೆ ಈಗಾಗಲೇ ದಿನಗಣನೆ ಶುರುವಾಗಿದ್ದು ಪ್ರತಿ ತಂಡಗಳು ಟೂರ್ನಿಗಾಗಿ ಸಕಲ ಸಿದ್ಧತೆ ನಡೆಸುತ್ತಿವೆ., ತಂಡಗಳಿಗಿಂತ ಅವುಗಳ ಅಭಿಮಾನಿಗಳಲ್ಲೇ ಹೆಚ್ಚಿನ ಉತ್ಸಾಹ ವ್ಯಕ್ತವಾಗುತ್ತಿದೆ.. ಅದರಲ್ಲೂ ಬೆಂಗಳೂರಿನ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳಂತೂ ಈ ಭಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಅಚಲ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ.

ಐಪಿಎಲ್ ಪ್ರಾರಂಭಗೊಂಡು 13 ವರ್ಷಗಳೇ ಕಳೆದಿದ್ದರೂ ಇನ್ನು ಒಂದು ಭಾರಿಯೂ ಕೂಡ ಬೆಂಗಳೂರು ತಂಡ ಕಿರೀಟವನ್ನು ಮುಡಿಗೇರಿಸಿಕೊಂಡಿಲ್ಲ ಹಾಗಾಗಿ ಈ ಭಾರಿ ಕಪ್ ಗೆಲ್ಲಬೇಕು ಎಂದು ಪಣತೊಟ್ಟಿದೆ. ಇದಕ್ಕೆ ಬೆಂಬಲವಂತೆ ಅಭಿಮಾನಿಗಳಂತೂ ಡಬಲ್ ಉತ್ಸಾಹದಲ್ಲಿ ತಮ್ಮ ನೆಚ್ಚಿನ ತಂಡಕ್ಕೆ ಈಗಿನಿಂದಲೇ ಬೆಂಬಲ ಸೂಚಿಸುತ್ತಿದ್ದಾರೆ

 

 

ಈ ಬಾರಿಯ ಆರ್​ಸಿಬಿ ತಂಡದ ಜೋಶ್​ ಹೆಚ್ಚಿಸಲು ಕಿಚ್ಚ ಸುದೀಪ್​ ಹಾಗೂ ರಚಿತಾ ರಾಮ್​ ಬರುತ್ತಿದ್ದಾರಂತೆ. ಅರ್ಥಾತ್​ ಈ ಬಾರಿ ಬೆಂಗಳೂರು ತಂಡದ ರಾಯಭಾರಿಗಳಾಗಿ ಇಬ್ಬರೂ ಆಯ್ಕೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.

ಸದ್ಯ ಈ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಹಾಗಂತ ಇದನ್ನು ಅಲ್ಲಗಳೆಯುವಂತಲೂ ಇಲ್ಲ. ಏಕೆಂದರೆ ಸುದೀಪ್​ ಈ ಮೊದಲಿನಿಂದಲೂ ಕ್ರಿಕೆಟ್​ ಪ್ರೇಮಿ. ಸಿನಿಮಾ ರಂಗದಲ್ಲಿರುವವರನ್ನೆಲ್ಲರೂ ಒಂದುಗೂಡಿಸಿ ಕ್ರಿಕೆಟ್​ ಪಂದ್ಯ ನಡೆಸಿದ್ದಾರೆ. ಹೀಗಾಗಿ, ಅವರಿಗೆ ಇಂಥ ಅವಕಾಶ ಸಿಕ್ಕರೆ ಅವರು ಅದರನ್ನು ಖಂಡಿತವಾಗಿಯೂ ಅಲ್ಲಗಳೆಯುವುದಿಲ್ಲ.

ಈ ಹಿಂದೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ , ಹ್ಯಾಟ್ರಿಕ್ ಹೀರೊ ಶಿವಣ್ಣ, ಮೋಹಕ ತಾರೆ ರಮ್ಯ, ಚಿರಂಜೀವಿ ಸರ್ಜಾ, ಕೃತಿ ಕರಬಂಧ, ರಾಗಿಣಿ ದ್ವೀವೇದಿ, ಸಂಜನಾ ಸೇರಿದಂತೆ, ಸಾಕಷ್ಟು ಸ್ಯಾಂಡಲ್​ವುಡ್​ ತಾರೆಯರು ರಾಯಲ್ ಚಾಲೆಂಜರ್ಸ್​​​ಗೆ ಬ್ರ್ಯಾಂಡ್ ಅಂಬಾಸಿಡರ್ಸ್ ಆಗಿ ಅಭಿಮಾನಿಗಳ ಜೊತೆ ತಂಡಕ್ಕೆ ಹುರಿದುಂಬಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top