fbpx
ಸಮಾಚಾರ

“ನಿನ್ನ ಶುಭಾಶಯಗಳನ್ನು ಮಿಸ್ ಮಾಡ್ತಿದ್ದೀನಿ ಚಿರು ಮಗನೇ” ಅರ್ಜುನ್ ಸರ್ಜಾ ಭಾವನಾತ್ಮಕ ಪೋಸ್ಟ್

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಕಿಂಗ್ ಅರ್ಜುನ್‌ ಸರ್ಜಾ ಅಭಿಮಾನಿಗಳಿಗೆ ಆಗಸ್ಟ್ 15ರಂದು ಡಬಲ್ ಧಮಾಕ. ಒಂದು ಸ್ವಾತಂತ್ರ್ಯ ದಿನಾಚರಣೆಯಾದರೆ, ಮತ್ತೊಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ. ಆದರೆ ಅಳಿಯಾ ಚಿರಂಜೀವಿ ಇಲ್ಲದ ಕಾರಣ ಅತ್ಯಂತ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

 

 

ಮೃತ ಚಿರಂಜೀವಿ ಸರ್ಜಾರನ್ನು ನೆನಪು ಮಾಡಿಕೊಂಡಿರುವ ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಪೋಸ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ಚಿರುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಅರ್ಜುನ್ ಸರ್ಜಾ ಅವರು ಚಿರು ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನ ಹುಟ್ಟುಹಬ್ಬದ ದಿನದೊಂದು ನನ್ನ ನೆಚ್ಚಿನ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಜೊತೆ ನಿಂತಿರುವ ಮತ್ತು ಚಿರುವಿಗೆ ಅರ್ಜುನ್ ಸರ್ಜಾ ಅವರೇ ಮೇಕಪ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top