fbpx
ಸಮಾಚಾರ

ನಾಯಿಗೆ ಕೃಷ್ಣನ ವೇಷ ಹಾಕಿ ಪೋಸ್ಟ್ ಮಾಡಿದ ಯುವತಿ: ವ್ಯಾಪಕ ಆಕ್ರೋಶ

ತಮ್ಮ ಮುದ್ದಿನ ನಾಯಿಗೆ ಕೃಷ್ಣನ ವೇಷ ತೊಡಿಸಿ, ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಮಾಡೆಲ್ ಅವರು ನಾಯಿಗೆ ಕೃಷ್ಣನ ವೇಷ ಹಾಕಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪೋಸ್ಟ್​ಅನ್ನು ಡಿಲಿಟ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಾಯಿಮರಿಗೆ ಬಣ್ಣದ ಅಂಗಿ ತೊಡಿಸಿ, ನವಿಲುಗರಿ ಹಾಗೂ ಕೈಗೆ ಕೊಳಲು ಕೊಟ್ಟು ತೆಗೆದ ಫೋಟೊವನ್ನು ತನ್ನ ಇನ್ ಸ್ಟಾಗ್ರಾಂ ಪೇಜ್‌ಗೆ ಅಪ್‌ಲೋಡ್‌ ಮಾಡಿದ್ದು, ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಕೂಡಲೆ ತನ್ನ ಅಕೌಂಟ್‌ನ್ನೇ ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ.

ಈ ಯುವತಿ ಮಂಗಳೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ನಾಯಿಮರಿಗೆ ಕೃಷ್ಣ ವೇಷ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದರು. ಅನೇಕರು ಲೈಕ್ಸ್‌ಗಳನ್ನು ಹಾಕಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಈ ಪೋಸ್ಟ್‌ ನೋಡಿದವರೊಬ್ಬರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಯುವತಿ ಉದ್ದೇಶಪೂರ್ವಕವಾಗಿಯೇ ನಾಯಿ ಮರಿಗೆ ಕೃಷ್ಣನ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿ, ತನ್ನ ಇನ್​ಸ್ಟಾಗ್ರಾಮಿನಲ್ಲಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಚಿತ್ರಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಈ ಪೋಸ್ಟ್ ಅನ್ನು ಯುವತಿ ಡಿಲೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top