fbpx
ಸಮಾಚಾರ

2024ರ ಚುನಾವಣೆಗೆ ಧೋನಿ ಸ್ಪರ್ಧಿಸುತ್ತಾರಾ? ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು?

ಭಾರತ ತಂಡಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ಅಪ್ರತಿಮ ನಾಯಕ ಎಂಎಸ್‌ ಧೋನಿ, ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡ ಕ್ಯಾಪ್ಟನ್‌ ಕೂಲ್‌, ನಿವೃತ್ತಿ ವಿಚಾರವನ್ನು ಶನಿವಾರ ಬಹಿರಂಗ ಪಡಿಸಿದ್ದರು.

ಧೋನಿ ನಿವೃತ್ತಿ ಬಳಿಕ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಸಬ್ರಮಣಿಯನ್‌ ಸ್ವಾಮಿ ಕೂಡ ಟ್ವಿಟರ್‌ ಮೂಲಕ ಶುಭಾಶಯ ತಿಳಿಸಿದ್ದು, ಜೊತೆಗೆ ಮಾಜಿ ನಾಯಕ ರಾಜಕೀಯ ಪ್ರವೇಶ ಮಾಡುವಂತೆ ಸಲಹೆಯನ್ನೂ ನೀಡಿದ್ದಾರೆ.

 

 

ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿ, ಎಂ.ಎಸ್. ಧೋನಿ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿದ್ದಾರೆ ಹೊರತು ಬೇರೆ ಯಾವುದರಿಂದಲೂ ಅಲ್ಲ. ಅವರ ಪ್ರತಿಭೆ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗಬೇಕು. ಕ್ರಿಕೆಟ್‌ನಲ್ಲಿ ಅವರು ಪ್ರದರ್ಶಿಸಿದ ಸ್ಪೂರ್ತಿದಾಯಕ ನಾಯಕತ್ವ ಸಾರ್ವಜನಿಕ ಜೀವನಕ್ಕೆ ಅಗತ್ಯವಿದೆ. ಅವರು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top