fbpx
ಸಮಾಚಾರ

ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಕೋವಿಡ್​-19ಗೆ ಬಲಿ

ಮಾಜಿ ಟೀಮ್ ಇಂಡಿಯಾ ಕ್ರಿಕೆಟಿಗ ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ಚೇತನ್ ಚೌಹಾಣ್ ನೆನ್ನೆ ಕೋವಿಡ್ ರೋಗಕ್ಕೆ ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿಯಿಂದ ವೆಂಟಿಲೇಟರ್ ಸಹಾಯದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ 73 ವರ್ಷದ ಚೌಹಾಣ್ ನೆನ್ನೆ ಸಂಜೆ ಅಸುನೀಗಿದ್ದಾರೆ.

ಲಕ್ನೋನ ಎಸ್​ಜಿಪಿಜಿಐ ಆಸ್ಪತ್ರೆಯಲ್ಲಿ ಮೊದಲು ದಾಖಲಾಗಿದ್ದ ಅವರನ್ನು ಅರೋಗ್ಯ ಬಿಗಡಾಯಿಸಿದ ಕಾರಣಕ್ಕೆ ಗುರುಗ್ರಾಮ್​ನ ಪ್ರತಿಷ್ಠಿತ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿಯೂ ಅವರಿಗೆ ಚೇತರಿಕೆ ಆಗದೇ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ.

ಭಾರತ ಕ್ರಿಕೆಟ್ ತಂಡದ ಪರವಾಗಿ 40 ಟೆಸ್ಟ್ ಗಳಲ್ಲಿ ಚೇತನ್ ಚೌಹಾನ್ ಆಡಿದ್ದರು. 73 ವರ್ಷದ ಚೌಹಾಣ್ ಪತ್ನಿ ಹಾಗೂ ಓರ್ವ ಪುತ್ರ ವಿನಾಯಕ್ ನ್ನು ಅಗಲಿದ್ದಾರೆ. ಚೌಹಾಣ್ ಸುನಿಲ್ ಗವಾಸ್ಕರ್ ಅವರಿಗೆ ದೀರ್ಘ ಕಾಲದ ಆರಂಭಿಕ ಜೊತೆಯಾಟಗಾರರಾಗಿದ್ದರು.

ಜತೆಗೆ ದೆಹಲಿ ತಂಡದ ನಾಯಕನಾಗಿ ಕಾರ್ಯನಿರ್ವಸಿದರೆ, ಡಿಡಿಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಮುಖ್ಯ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ತಂಡ, ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಒಮ್ಮೆ ತಂಡದ ಮ್ಯಾನೇಜರ್​ ಆಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top