fbpx
ಸಮಾಚಾರ

ಧೋನಿ ಮತ್ತು ನಾನು ಆಗಸ್ಟ್‌ 15ರಂದೇ ನಿವೃತ್ತಿ ಹೇಳಿದ್ದು ಈ ಕಾರಣಕ್ಕೆ– ಅಸಲಿ ವಿಚಾರ ರಿವೀಲ್‌ ಮಾಡಿದ್ರು ರೈನಾ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿ ಮತ್ತು ತಾನು (ರೈನಾ) ಸ್ವಾತಂತ್ರ್ಯ ದಿನಾಚರಣೆಯ ದಿನವೇ ನಿವೃತ್ತಿ ಹೇಳಿದ್ದು ಯಾಕೆ ಎಂದು ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಈಗ ಬಹಿರಂಗಪಡಿಸಿದ್ದಾರೆ.

ಮಾಧ್ಯಮದೊಂದರ ಜೊತೆ ಮಾಟೆಕಟೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಸುರೇಶ್‌ ರೈನಾ ನಾವಿಬ್ಬರು ಮೊದಲೇ ನಿರ್ಧರಿಸಿ ಆಗಸ್ಟ್‌ 15 ರಂದು ನಿವೃತ್ತಿ ಘೋಷಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆವು ಎಂದು ತಿಳಿಸಿದ್ದಾರೆ.

ಧೋನಿ ಜೆರ್ಸಿ ನಂಬರ್‌ 7, ನನ್ನದು 3. ಇಬ್ಬರ ನಂಬರ್‌ ಸೇರಿದರೆ 73 ಆಗುತ್ತದೆ. ಆಗಸ್ಟ್‌ 15ರಂದು ಸ್ವಾತಂತ್ರ್ಯ ಸಿಕ್ಕಿ ನಮಗೆ 73 ವರ್ಷ ಪೂರ್ಣಗೊಳ್ಳುತ್ತದೆ. ಈ ದಿನ ಬಿಟ್ಟರೆ ಬೇರೆ ಉತ್ತಮ ದಿನ ಇಲ್ಲ ಎಂದು ತೀರ್ಮಾನಿಸಿ ಇಬ್ಬರೂ ಜೊತೆಯಲ್ಲಿ ನಿವೃತ್ತಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಬಲಗೈ-ಎಡಗೈ ಜೋಡಿ ಆಪ್ತರಷ್ಟೇ ಅಲ್ಲದೆ, ಟೀಮ್ ಇಂಡಿಯಾ ಪಾಲಿನ ಆಪತ್ಭಾಂಧವರಾಗಿ ಕೂಡ ಹಲವು ಬಾರಿ ಮಿಂಚಿದ್ದಾರೆ. ಇವರಿಬ್ಬರ ಜುಗಲ್​ಬಂದಿಯಲ್ಲಿ ಹಲವು ಪಂದ್ಯಗಳನ್ನೂ ಸಹ ಭಾರತ ಗೆದ್ದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top