fbpx
ಸಮಾಚಾರ

ಧೋನಿಗೆ ಸಿಗುತ್ತಾ ಭಾರತ ರತ್ನ ಪ್ರಶಸ್ತಿ?

ಟೀಂ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗ, ಭಾರತಕ್ಕೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ. ಇದೀಗ ದಿಢೀರ್ ವಿದಾಯ ನೀಡಿ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಧೋನಿ ವಿದಾಯದ ಬೆನ್ನಲ್ಲೇ ಧೋನಿಗೆ ಭಾರತ ರತ್ನ ನೀಡಲು ಆಗ್ರಹ ವ್ಯಕ್ತವಾಗುತ್ತಿದೆ.

ಮಧ್ಯಪ್ರದೇಶದ ಭೂಪಾಲ್​​​ನ ಕಾಂಗ್ರೆಸ್ ಶಾಸಕ ಪಿಸಿ ಶರ್ಮಾ, ​ ಧೋನಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಭಾರತ ಕೀರ್ತಿಯನ್ನ ಕ್ರಿಕೆಟ್​​ನಲ್ಲಿ ಉನ್ನತ ಸ್ಥಾನಕ್ಕೇರಿಸಿದ್ದಾರೆ. ಭಾರತದ ರತ್ನವಾಗಿರುವ ಧೋನಿ, ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟಿಗನಿಗೆ ಭಾರತ ರತ್ನ ನೀಡಿ ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ, ಕಾಂಗ್ರೆಸ್​ ನಾಯಕ ಕೆಪಿ ಶರ್ಮಾ ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ. ಈ ಬೆನ್ನೆಲ್ಲೆ ಕ್ರಿಕೆಟ್​ ಫ್ಯಾನ್ಸ್​ ಕೂಡ ಕಾಂಗ್ರೆಸ್​​ ನಾಯಕನಿಗೆ ದನಿಗೂಡಿಸಿದ್ದಾರೆ.

 

 

ಎಂ.ಎಸ್.ಧೋನಿ ಕ್ರೀಡಾ ವಿಭಾಗದ ಅತ್ಯುನ್ನತ ಗೌರವ ಖೇಲ್ ರತ್ನ ಪ್ರಶಸ್ತಿಗೆ ಭಾದೃಜನರಾಗಿದ್ದಾರೆ. ಇದರ ಜೊತೆಗೆ ಪದ್ನಭೂಷಣ ಹಾಗೂ ಪದ್ನಶ್ರಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಭಾರತ ರತ್ನ ಪ್ರಶಸ್ತಿ ಸಿಗುವುದೇ ಎಂಬುದನ್ನು ಕಾದು ನೋಡಬೇಕು.

ಅಂದಹಾಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ 2014ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಈ ಮೂಲಕ ಸಚಿನ್ ತೆಂಡುಲ್ಕರ್ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top