fbpx
ಸಮಾಚಾರ

ಕೊರೋನಾ ಗೆದ್ದು ಪ್ಲಾಸ್ಮಾ ದಾನ ಮಾಡಿದ ಕುಣಿಗಲ್ ಶಾಸಕ: ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಡಾ. ರಂಗನಾಥ್

ಕಳೆದ ತಿಂಗಳು ಕೋವಿಡ್ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕುಣಿಗಲ್ ಶಾಸಕ ಡಾ. ರಂಗನಾಥ್‌ ಹಾಗೂ ಅವರ ಸಹೋದರ ಡಾ.ರಾಮಚಂದ್ರ ಪ್ರಭು ಅವರು ತಮ್ಮ ದೇಹದ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ದಾನ ಮಾಡಿದ್ದಾರೆ.

ಕಾರ್ಪೊರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕುಣಿಗಲ್ ಶಾಸಕ ಡಾ. ರಂಗನಾಥ್​ ಇಂದು ಪ್ಮಾಸ್ಮಾದಾನ ಮಾಡಿದ್ದಾರೆ. ಈ ಮೂಲಕ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಡಾ. ರಂಗನಾಥ್ ಪಾತ್ರರಾಗಿದ್ದಾರೆ.

ಡಾ. ರಂಗನಾಥ್‌ ಜೊತೆ ಅವರ ಸಹೋದರ ಡಾ.ರಾಮಚಂದ್ರ ಪ್ರಭು ಎನ್ನುವವರು ಕೂಡ ಪ್ಲಾಸ್ಮಾ ದಾನ ಮಾಡಿದರು. ಬೆಂಗಳೂರಿನಲ್ಲಿ ಈಗಾಗಲೇ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ಇದ್ದ ಡಾ. ರಂಗನಾಥ್‌, ಕೊವಿಡ್ ವಿರುದ್ದದ ಸಮರದಲ್ಲಿ ತಮ್ಮ ಪಾಲೂ ಇರಲಿ ಅಂತಾ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.

ಇತ್ತೀಚೆಗಷ್ಟೇ ಡಾ. ರಂಗನಾಥ್‌ ಕೊರೊನಾದಿಂದ ಚೇತರಿಸಿಕೊಂಡಿದ್ದರು. ಚೇತರಿಸಿಕೊಂಡ ನಂತರ ತಮ್ಮ ಸಹೋದರ ಡಾ. ರಾಮಚಂದ್ರ ಪ್ರಭು ಜೊತೆ ಸೇರಿ ಕೊರೊನಾ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಂಗವಾಗಿ ಈಗ ಡಾ. ರಂಗನಾಥ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top